ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ 6 ರೈಲುಗಳಿಗೆ ರೈಲ್ವೆ ಸಚಿವಾಲಯವು ಕುಮಟಾ ಮತ್ತು ಕುಂದಾಪುರ ಸ್ಟೇಶನ್‌ಗಳಲ್ಲಿ ಪ್ರಾಯೋಗಿಕ ನಿಲುಗಡೆ ಮಾ. 15ರಿಂದ ನೀಡಲಾಗುವುದು.
ತಿರುವನಂತಪುರಂ ಸೆಂಟ್ರಲ್ – ನಿಝಾಮುದ್ದೀನ್ ಎಕ್ಸ್‌ಪ್ರೆಸ್ (22653) ಹರ್ಝತ್ ರೈಲು ಕುಂದಾಪುರ ಸ್ಟೇಶನಿಗೆ ಮಾ. 15ರಂದು ಮಧ್ಯಾಹ್ನ 2.06ಕ್ಕೆ ಆಗಮಿಸಿ 2.08ಕ್ಕೆ ತೆರಳಲಿದೆ. ಹರ್ಝತ್ ನಿಝಾಮು ದ್ದೀನ್ – ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ (22656) ರೈಲು ಮಾ. 15ರಂದು ಕುಂದಾಪುರಕ್ಕೆ ಮಧ್ಯಾಹ್ನ 1.28ಕ್ಕೆ ಆಗಮಿಸಿ 1.30ಕ್ಕೆ ತೆರಳಲಿದೆ.
ಕೊಯಮತ್ತೂರು – ಹಿಸ್ಸಾರ್ ಎಕ್ಸ್‌ಪ್ರೆಸ್ (22476) ರೈಲು ಮಾ. 16ರಂದು ಕುಮಟಾ ಸ್ಟೇಶನಿಗೆ ರಾತ್ರಿ 1.46ಕ್ಕೆ ಆಗಮಿಸಿ, 1.48ಕ್ಕೆತೆರಳಲಿದೆ. ಹಿಸಾರ್ – ಕೊಯಮತ್ತೂರು ಎಕ್ಸ್‌ಪ್ರೆಸ್ (22475) ರೈಲು ಮಾ. 21ರಂದು ಬೆಳಗ್ಗೆ 2.10ಕ್ಕೆ ಆಗಮಿಸಿ, 2.12ಕ್ಕೆ ತೆರಳಲಿದೆ.
ಹರ್ಝತ್ ನಿಝಾಮು ದ್ದೀನ್ – ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ (22654) ರೈಲು ಕುಂದಾಪುರಕ್ಕೆ ಮಾ. 18ರಂದು ಮಧ್ಯಾಹ್ನ 1.28ಕ್ಕೆ ಆಗಮಿಸಿ 1.30ಕ್ಕೆ ತೆರಳಲಿದೆ. ಎರ್ನಾಕುಲಂ ಜಂಕ್ಷನ್ – ಹರ್ಝತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್ (22655) ರೈಲು ಮಾ. 19ರಂದು ಕುಂದಾಪುರ ಸ್ಟೇಶನಿಗೆ ಮಧ್ಯಾಹ್ನ 2.06ಕ್ಕೆ ಆಗಮಿಸಿ 2.08ಕ್ಕೆ ತೆರಳಲಿದೆ.
ರೈಲುಗಳ ಆಗಮನ, ನಿರ್ಗಮನ, ನಿಲುಗಡೆ ತಾಣಗಳ ಮಾಹಿತಿಯನ್ನು www.enquiry.indianrail.gov.in ಎನ್‌ಟಿಎಸ್ ಆ್ಯಪ್ ಮೂಲಕ ಪಡೆದುಕೊಳ್ಳಬಹುದು.
ಮಾ.15ರಂದು ಕುಂದಾಪುರದಲ್ಲಿ ಸ್ವಾಗತ:
ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಕುಂದಾಪುರ-ದಿಲ್ಲಿ ನಡುವಿನ ತಿರುವನಂತಪುರಂ-ನಿಜಾಮುದ್ದೀನ್ ಹಾಗೂ ಎರ್ನಾಕುಲಂ-ನಿಜಾಮುದ್ದೀನ್ ರೈಲುಗಳ ನಿಲುಗಡೆಗೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಾ.15ರಂದು ಮಧ್ಯಾಹ್ನ 1.38ಗಂಟೆ ಹಾಗೂ 2ಗಂಟೆಗೆ ಸ್ವಾಗತ ಕೋರಲಾಗುವುದು ಎಂದು ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ತಿಳಿಸಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಯ ಮೇರೆಗೆ ರೈಲ್ವೆ ಸಚಿವರು ಕುಂದಾಪುರದಲ್ಲಿ ಈ ರೈಲುಗಳ ನಿಲುಗಡೆಗೆ ಆದೇಶ ಹೊರಡಿಸಿದ್ದಾರೆ. 1.38 ಗಂಟೆಗೆ ಮೊದಲು ಕೇರಳದ ಕಡೆ ತೆರಳುವ ರೈಲು ನಿಲುವಡೆ ಆಗಲಿದ್ದು, ನಂತರ ಮಧ್ಯಾಹ್ನ ಗಂಟೆ ದೆಹಲಿ ಕಡೆ ತೆರಳುವ ರೈಲು ನಿಲುಗಡೆಯಾಗಲಿದೆ. ಈ ಎರಡು ರೈಲುಗಳನ್ನು ಪ್ರಯಾಣಿಕರ ಮತ್ತು ರೈಲ್ವೆ ಸಮಿತಿ ಅವರ ಜತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಸ್ವಾಗತಿಸಲಿದ್ದಾರೆ.