ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಎಮ್.ಆರ್.ಪಿ.ಎಲ್ ನ ಸಿ.ಎಸ್.ಆರ್ ನಿಧಿಯ ಧನ ಸಹಾಯದಿಂದ ಅಲಿಮ್ಕೋ ಎಸಿಸಿ, ಬೆಂಗಳೂರು ಇವರ ಮೂಲಕ ಉಡುಪಿ ಜಿಲ್ಲಾಡಳಿತ. ಉಡುಪಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಅಂಗವಿಕಲರ ಪುನರ್ವಸತಿ ಕೇಂದ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ವ್ಯಾಪ್ತಿಯ ಅಂಗವಿಕಲರಿಗೆ ದೈನಂದಿನ ಚಟುವಟಿಕೆಗಳಿಗೆ ಪೂರಕವಾದ ಸಾಧನ ಸಲಕರಣೆಯನ್ನು ವಿತರಿಸಲು ಶಿಬಿರವನ್ನು ಆಯೋಜಿಸಲಾಗಿದೆ.
- ಉಡುಪಿ ತಾಲೂಕು ವ್ಯಾಪ್ತಿಯ ಅಂಗವಿಕಲರಿಗೆ ಆಗಸ್ಟ್ 24 ರಂದು ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಅಜ್ಜರಕಾಡು
- ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಅಂಗವಿಕಲರಿಗೆ ಆಗಸ್ಟ್ 25 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ
- ಬೈಂದೂರು ತಾಲೂಕು ವ್ಯಾಪ್ತಿಯ ಅಂಗವಿಕಲರಿಗೆ ಆಗಸ್ಟ್ 26 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು
- ಕುಂದಾಪುರ ತಾಲೂಕು ವ್ಯಾಪ್ತಿಯ ಅಂಗವಿಕಲರಿಗೆ ಆಗಸ್ಟ್ 27 ರಂದು ತಾಲೂಕು ಪಂಚಾಯತ್ ಸಭಾಂಗಣ ಕುಂದಾಪುರ
- ಕಾರ್ಕಳ ತಾಲೂಕು ವ್ಯಾಪ್ತಿಯ ಅಂಗವಿಕಲರಿಗೆ ಆಗಸ್ಟ್ 28 ರಂದು ತಾಲೂಕು ಪಂಚಾಯತ್ ಸಭಾಂಗಣ ಕಾರ್ಕಳ
- ಕಾಪು ತಾಲೂಕು ವ್ಯಾಪ್ತಿಯ ಅಂಗವಿಕಲರಿಗೆ ಆಗಸ್ಟ್ 29 ರಂದು ಜೆ.ಸಿ ಭವನ ಕಾಪು ಇಲ್ಲಿ ಆಯೋಜಿಸಲಾಗಿದೆ.
ಅಂಗವಿಕಲರಿಗೆ ಉಚಿತವಾಗಿ ಶ್ರವಣ ಸಾಧನ, ಕೃತಕ ಕಾಲು, ಕ್ಯಾಲಿಪರ್, ಮೊಣಕೈ ಊರುಗೋಲು, ಕಂಕುಳ ದೊಣ್ಣೆ, ರೋಲೆಟರ್, ಊರುಗೋಲು, ಗಾಲಿ ಕುರ್ಚಿ, ಸಿ.ಪಿ.ಗಾಲಿ ಕುರ್ಚಿ, ತ್ರಿಚಕ್ರ ಸೈಕಲ್, ಬ್ರೈಲ್ ಕಿಟ್, ಸ್ಮಾರ್ಟ್ ಕೇನ್ ,ಸೆಲ್ ಫೋನ್, ಸ್ಮಾಟ್ ್ ಫೋನ್ ಗಳನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ದೂರವಾಣಿ ಸಂಖ್ಯೆ 0820-2574810/811 ನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರ ನಾಯ್ಕ್ ತಿಳಿಸಿದ್ದಾರೆ.