Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋಟ: ಪಂಚವರ್ಣ ಯುವಕ ಮಂಡಲದ ನೇತ್ರತ್ವದ 100ನೇ ದಿನದ ಸ್ವಚ್ಛತಾ ಅಭಿಯಾನ
    ಊರ್ಮನೆ ಸಮಾಚಾರ

    ಕೋಟ: ಪಂಚವರ್ಣ ಯುವಕ ಮಂಡಲದ ನೇತ್ರತ್ವದ 100ನೇ ದಿನದ ಸ್ವಚ್ಛತಾ ಅಭಿಯಾನ

    Updated:13/12/2021No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕೋಟ:
    ಒಂದು ಆಂದೋಲ ಪ್ರಾರಂಭ ಮಾಡುವುದು ಸುಲಭ ಆದರೆ ಅದನ್ನು ನಿರಂತರವಾಗಿಸುವುದು ದೊಡ್ಡ ಸಾಧನೆ ಈ ನಿಟ್ಟಿನಲ್ಲಿ ಪಂಚವರ್ಣ ಯುವಕ ಮಂಡಲ ಸೇರಿದಂತೆ ಎಲ್ಲಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ

    Click Here

    Call us

    Click Here

    ಪಂಚವರ್ಣ ಯುವಕ ಮಂಡಲ ಕೋಟ ಇವರ ನೇತ್ರತ್ವದಲ್ಲಿ ಗಿಳಿಯಾರು ಯುವಕ ಮಂಡಲ ಗಿಳಿಯಾರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಮಣೂರು ಫ್ರೆಂಡ್ಸ್ ಮಣೂರು, ಯಕ್ಷಸೌರಭ ಕಲಾರಂಗ ಕೋಟ, ಮಹಿಳಾ ಬಳಗ ಹಂದಟ್ಟು ಇವರುಗಳ ಸಂಯೋಜನೆಯಲ್ಲಿ ಲಕ್ಷ್ಮೀಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಕೋಟ ಪಡುಕರೆ, ಗೀತಾನಂದ ಫೌಂಡೇಶನ್ ಮಣೂರು, ಕೋಟ ಗ್ರಾಮಪಂಚಾಯತ್, ಕ್ಲಿನ್ ಕುಂದಾಪುರ ಪ್ರೊಜೆಕ್ಟ್, ಪರಿಸರಸ್ನೇಹಿ ಬಳಗ ಮಟ್ನಕಟ್ಟೆ ಕೆರ್ಗಾಲ್ ಉಪ್ಪುಂದ, ಕ್ಲಿನ್ ತ್ರಾಸಿ ಪ್ರೊಜೆಕ್ಟ್, ಸ್ವಚ್ಛತಾ ಮಾಸತಂಡ ಮರಂತೆ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮಣೂರು ಮೂಲಕ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ಸುಮಾರು ೩ವರೆ ಕಿಮೀ ದೂರ ಹಮ್ಮಿಕೊಂಡ ನೂರನೇ ದಿನದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಬೃಹತ್ ಸ್ವಚ್ಛತಾ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಉಳಿಸುವ ಉದ್ದೇಶ ಅತ್ಯವಶ್ಯಕ, ಏಕೆಂದರೆ ನಮ್ಮ ನಮ್ಮ ಮನೆಗಳಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ನಿಂದ ಈ ಪರಿಸರಕ್ಕೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಜ್ಞಾವಂತ ನಾಗರಿಕರ ಸೇವಾ ಕಾರ್ಯ ಬಹುದೊಡ್ಡದು ಇದರ ಜೊತೆಗೆ ಆಯಾ ಭಾಗಗಳ ಪಂಚಾಯತ್‌ಗಳಲ್ಲಿ ಆರಂಭಗೊಳ್ಳುತ್ತಿರುವ ಎಸ್‌ಎಲ್‌ಆರ್‌ಎಮ್ ಘಟಕಗಳ ಪಾತ್ರ ಕೂಡ ಗಣನೀಯವಾದದ್ದು ಈ ಮೂಲಕ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸ್ಥಳೀಯಾಡಳಿತ ಹಾಗೂ ಸಂಘಸಂಸ್ಥೆಗಳು ಹಮ್ಮಿಕೊಂಡರೆ ನಮ್ಮೆಲ್ಲರ ಉದ್ದೇಶಗಳು ಈಡೇರಿದಂತೆ ಅದರ ಜೊತೆಗೆ ನೂರು ವಾರಗಳ ಪರಿಸರ ಜಾಗೃತಿ ಕಾರ್ಯಕ್ರಮ ಇನ್ನಷ್ಟು ಸಂಘಟನೆಗಳ ಮೂಲಕ ಆಯಾ ಭಾಗಗಳಲ್ಲಿ ಹೊರಹೊಮ್ಮಲಿ ಎಂದು ಹಾರೈಸಿದರು.

    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪರಿಸರ ಉಳಿಸಿ ಆಂದೋಲನದ ಭಾಗವಾಗಿ ಪರಿಸರ ತಜ್ಞ ಡಾ.ಬಾಲಕೃಷ್ಣ ಮುದ್ದೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಿಡ ನೆಟ್ಟು ಮಾತನಾಡಿ ನಮ್ಮ ವ್ಯವಸ್ಥೆ ಹೇಗೆ ಎಂದರೆ ನಾವು ಹಿಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಕಷ್ಟು ಮರಗಳನ್ನು ಕಂಡಿದ್ದೇವೆ ಅದರಿಂದ ಲಾಭಗಳನ್ನು ಪಡೆದಿದ್ದೇವೆ ಆದರೆ ರಸ್ತೆ ಅಗಲಿಕರಣದ ನೆಪದಲ್ಲಿ ಮರಗಳನ್ನು ನಾಶಮಾಡಲಾಗಿದೆ.ಆದರೆ ಸರಕಾರದ ಸುತ್ತೋಲೆ ಪ್ರಕಾರ ಒಂದು ಮರ ಹಾನಿಗೊಳಿಸಿದರೆ ಮೂರು ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗಬೇಕಿದೆ, ಆದರೆ ಆ ಕೆಲಸ ನಮ್ಮ ಈ ವ್ಯವಸ್ಥೆ ಮಾಡಲಿಲ್ಲ ಬದಲಾಗಿ ಇವತ್ತು ನಾವುಗಳು ನಮ್ಮ ಪ್ರಕೃತಿಯನ್ನು ಬಲಿಕೊಟ್ಟಿದ್ದೇವೆ.ಅದರಿಂದ ದುಷ್ಪರಿಣಾಮ ಎದುರಿಸುತ್ತಿದ್ದೇವೆ ಇದಕ್ಕೆ ನಾವುಗಳೆ ಕಾರಣ ನಮ್ಮ ಪರಿಸರ ಉಳಿಸಿಕೊಳ್ಳವ ಜವಾಬ್ದಾರಿ ನಮ್ಮೆಲರ ಮೇಲಿದೆ ಹೊರತು ಹೊರಗಿವ ವ್ಯವಸ್ಥೆ ಸೃಷ್ಠಿಸುವವರ ಮೇಲಿಲ್ಲ, ನಮ್ಮಲ್ಲಿ ಪ್ರತಿಭಟನಾ ಮನೋಭಾವನೆ ಅಳಿಸಿ ಹೋಗುತ್ತಿವೆ ಇದು ಆಗಬಾರದು ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಿಸುವ ಕೆಲಸ ಈ ಪಂಚವರ್ಣ ಯುವಕ ಮಂಡಲ ಹಾಗೂ ಇನ್ನಿತರ ಸಂಘಟನೆಗಳಂತೆ ಆಗಬೇಕು ಎಂದು ಕರೆ ಇತ್ತರು.

    ಇದೇ ಮೊದಲ ಬಾರಿ ಎಂಬಂತೆ ಕೋಟ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು ೩.ವರೆ ಕಿಮೀ ಯಷ್ಟು ದೂರ ಕ್ರಮಿಸಿ ಎರಡು ದಿಕ್ಕುಗಳ ರಾಷ್ಟ್ರೀಯ ಹೆದ್ದಾರಿ ಪ್ಲಾಸ್ಟಿಕ್ ಮುಕ್ತ ಪರಿಸರವಾಗಿಸಿದೆ.ಅಲ್ಲದೆ ದೂರದ ತಾಲೂಕು ಬೈಂದೂರಿನ ಉಪ್ಪುಂದದ ಮಟ್ನಕಟ್ಟೆ ಪರಿಸರಸ್ನೇಹಿ ಬಳಗ,ಕ್ಲಿನ್ ತ್ರಾಸಿ ಪ್ರೊಜೆಕ್ಟ್, ಸ್ವಚ್ಛತಾ ಮಾಸ ತಂಡ ಮರವಂತೆ,ಕ್ಲಿನ್ ಕುಂದಾಪುರ ಪಾಲ್ಗೊಂಡಿದ್ದು ಸ್ವಚ್ಛತಾ ಅಭಿಯಾನಕ್ಕೆ ಮತಷ್ಟು ಮೆರುಗು ಹೆಚ್ಚಿಸಿತು. ಸ್ಥಳೀಯ ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್ ಎಸ್ ಎಸ್ ಘಟಕದ ನೂರಕ್ಕೂ ಅಧಿಕ ವಿದ್ಯಾರ್ಥಿ ಪಾಲ್ಗೊಂಡು ತಾವು ಪರಿಸರ ಉಳಿಸಲು ಸೈ ಎನ್ನಿಸಿಕೊಂಡರು.

    ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಂಗಳೂರಿನ ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ , ವಿನಯಚಂದ್ರ ಸಾಸ್ತಾನ, ಪಾಲ್ಲೊಂಡು ಪರಿಸರ ಜಾಗೃತಿಯ ಬಗ್ಗೆ ಮುಂದಿನ ತಲೆಮಾರು ಎಂಬ ವಿಷಯದ ಬಗ್ಗೆ ಉಲ್ಲೇಖಿಸಿ ಶುಭಹಾರೈಸಿದರು.

    Click here

    Click here

    Click here

    Call us

    Call us

    ಉಡುಪಿ ಜಿಲ್ಲಾಪಂಚಾಯತ್ ಯೋಜನಾಧಿಕಾರಿ ಬಾಬು ಎಮ್ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸುರೇಂದ್ರ ಕೋಟ ನಿರ್ಮಾಣದ ಮನಸ್ಸು ಕಸ ಎಂಬ ಕಿರುಚಿತ್ರವನ್ನು ಆನಂದ್ ಸಿ ಕುಂದರ್ ಅನಾವರಣಗೊಳಿಸಿದರು.

    ಕೋಟದ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ್ ನಾವಡ, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,P ಟತಟ್ಟು ಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಶ್ರೀಕಾಂತ್ ಶೆಣೈ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಸಂಘದ ಅಧ್ಯಕ್ಷ ಅಮೃತ್ ಜೋಗಿ, ಸ್ಥಾಪಕಾಧ್ಯಕ್ಷ ಕೆ. ಸುರೇಶ್ ಗಾಣಿಗ, ಮಣೂರು ಫ್ರೆಂಡ್ಸ್ ನ ಅಧ್ಯಕ್ಷ ದಿನೇಶ್ ಆಚಾರ್ಯ, ವಿಪ್ರ ಮಹಿಳಾ ಬಳಗದ ಭಾರತಿ ಮಯ್ಯ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಕೋಟ ಯಕ್ಷಸೌರಭ ಕಲಾರಂಗದ ಸತ್ಯನಾರಾಯಣ ಆಚಾರ್ಯ ,ಕ್ಲಿನ್ ಕುಂದಾಪುರ ಪ್ರೊಜೆಕ್ಟ್ ಇದರ ಭರತ್ ಬಂಗೇರ,ಕ್ಲಿನ್ ತ್ರಾಸಿ ಪ್ರೊಜೆಕ್ಟ್ ಇದರ ನಾಗರಾಜ್ ಆಚಾರ್ಯ ನಾಯಕನವಾಡಿ, ಸ್ವಚ್ಛತಾ ಮಾಸತಂಡ ಮರವಂತೆ ಇದರ ಕರುಣಾಕರ ಆರ್ ಮರವಂತೆ, ನಾಗರಾಜ್ ಖಾರ್ವಿ, ಜನತಾ ಫಿಶ್‌ಮಿಲ್ ಅಂಡ್ ಆಯಿಲ್ ಪ್ರಾಡೆಕ್ಟ್ ಮ್ಯಾನೇಜರ್ ಶ್ರೀನಿವಾಸ ಕುಂದರ್, ಗೀತಾನಂದ ಫೌಂಡೇಶನ್ ಸಮಾಜಸೇವಾ ವಿಭಾಗದ ರವಿಕಿರಣ್ ಕೋಟ ಹಾಗೂ ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ಗಳ ಉಪಾಧ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.ಪಂಚವರ್ಣದ ಗೌರವ ಸಲಹೆಗಾರ ಚಂದ್ರ ಆಚಾರ್ಯ ಸ್ವಾಗತಿಸಿದರು. ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿದರು.

    ಕಾರ್ಯಕ್ರಮವನ್ನು ಉಪನ್ಯಾಸಕ ಕೆ.ರಾಘವೇಂದ್ರ ತುಂಗ ನಿರೂಪಿಸಿದರು.ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ ವಂದಿಸಿದರು.ಪಂಚವರ್ಣದ ಸಂಚಾಲಕ ಅಜಿತ್ ಅಚಾರ್ಯ ಸಹಕರಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ

    18/12/2025

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ

    18/12/2025

    ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ

    18/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.