Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ತುಳು ಹಾಸ್ಯ ಲಹರಿಯ ಮೌಲಿಕ ಸಂವಹನ
    alvas nudisiri

    ತುಳು ಹಾಸ್ಯ ಲಹರಿಯ ಮೌಲಿಕ ಸಂವಹನ

    Updated:26/12/2022No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ವಿದ್ಯಾಗಿರಿ:
    ಆಳ್ವಾಸ್‌ನ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ಕೃಷಿಸಿರಿ ವೇದಿಕೆಯು ಕರಾವಳಿ ಸಾಂಸ್ಕೃತಿಕ ಸೊಗಡಿನ ಸ್ಪರ್ಶದೊಂದಿಗಿನ ತುಳು ಹಾಸ್ಯ ಲಹರಿಗೆ ಸಾಕ್ಷಿಯಾಯಿತು. ದೇಶದ ವಿವಿಧ ಪ್ರದೇಶಗಳ ಸಾಂಸ್ಕೃತಿಕ ಭಿನ್ನತೆಗಳ ಮೇಲೆ ಬೆಳಕು ಚೆಲ್ಲುವುದರೊಂದಿಗೆ ತುಳುನಾಡಿನ ವೈಶಿಷ್ಟ್ಯತೆಯನ್ನೂ ಕಾಣಿಸುವಲ್ಲಿ ಯಶಸ್ವಿಯಾಯಿತು.

    Click Here

    Call us

    Click Here

    ಭಾರತದ ಕೃಷಿ ಪರಂಪರೆಯ ಮೂಲವಾದ ಗೋ ಸಂಪತ್ತಿನ ಪ್ರಾಮುಖ್ಯತೆ, ಗ್ರಾಮೀಣ ಪ್ರದೇಶದ ಕೊಡುಗೆಯ ಮಹತ್ವ, ಗ್ರಾಮೀಣ ಪರಂಪರೆಯ ವೈಶಿಷ್ಟ್ಯತೆಯನ್ನು ಈ ಹಾಸ್ಯ ಕಾರ್ಯಕ್ರಮ ಚಿತ್ರಿಸಿತು. ಜೊತೆಗೆ ಮೌಲಿಕ ಬದುಕಿನ ಕುರಿತ ಸಂದೇಶವನ್ನೂ ಅಭಿವ್ಯಕ್ತಿಸಿತು. ಕೇವಲ ಜ್ಯೋತಿಷ್ಯವನ್ನು ಮಾತ್ರ ನಂಬಿ ಕೂತರೆ ಸಾಲದು. ಜೊತೆಗೆ ಸ್ವ-ಪ್ರಯತ್ನವೂ ಬೇಕು ಎಂಬ ಉತ್ತಮ ಸಂದೇಶವನ್ನೊಳಗೊಂಡ ಹಾಸ್ಯವು ನೆರೆದಿದ್ದ ಜನರನ್ನು ನಗೆಕಡಲಲ್ಲಿ ತೇಲುವಂತೆ ಮಾಡಿತು. ರಂಗ್‌ದ ರಾಜೆ ಎಂದೇ ಪ್ರಸಿದ್ದರಾದ ಸುಂದರ್ ರೈ ಮಂದಾರ, ಕುಸಲ್ದ ಮುತ್ತು, ಅರುಣ್ ಚಂದ್ರ ಬಿ.ಸಿ.ರೋಡು ಮತ್ತು ತಂಡ ಹಾಗೂ ಕುಡ್ಲ ಕುಸಲ್ ತಂಡದ ಕಲಾವಿದರು ‘ತುಳು ಹಾಸ್ಯ ಲಹರಿ’ ಕಾರ್ಯಕ್ರಮವನ್ನು ವಿನೂತನವಾಗಿ ನಡೆಸಿಕೊಟ್ಟರು.

    ಮೊದಲ ಹಾಸ್ಯ ಪ್ರಸಂಗದಲ್ಲಿ ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿ ದನ ತೆಗೆದುಕೊಳ್ಳಲು ಬ್ಯಾಂಕ್‌ನಿಂದ ಸಾಲ ತೆಗೆದು, ನಂತರ ದನ ಕಳೆದುಕೊಂಡು ಬ್ಯಾಂಕ್ ಮ್ಯಾನೇಜರ್‌ನಿಂದ ಆತ ಪರಿತಪಿಸುವ ಪಾಡನ್ನು ಕಾಣಿಸಿತು. ಈ ಪಾಡಿನ ಚಿತ್ರಣದಲ್ಲಿಯೇ ಹಾಸ್ಯವಿತ್ತು. ಇದರ ಜೊತೆಗೆ ಭಾರತದ ಕೃಷಿ ಪರಂಪರೆಯ ಮೂಲವಾದ ಗೋ ಸಂಪತ್ತಿನ ಪ್ರಾಮುಖ್ಯತೆಯನ್ನೂ ಪ್ರಚುರಪಡಿಸಿತು.

    ಮತ್ತೊಂದು ಹಾಸ್ಯ ಪ್ರಸಂಗವು ಇನ್ನೊಬ್ಬರ ಸಂಪತ್ತನ್ನು ಪಡೆದುಕೊಳ್ಳುವ ದುರಾಸೆ ಇರಬಾರದು ಎಂಬುದನ್ನು ಮನಗಾಣಿಸಿತು. ಒಬ್ಬಾಕೆ ಒಂದು ಚಿನ್ನದ ಉಂಗುರ ಕಳೆದುಕೊಂಡಾಗ ನೆರವಿಗೆ ಧಾವಿಸುವ ಬದಲು ಸ್ನೇಹಿತರೇ ದುರಾಸೆಪಟ್ಟಾಗ ಆಗುವ ಪರಿಣಾಮವನ್ನು ಚಿತ್ರಿಸಿತು. ಹಾಸ್ಯದ ಆಯಾಮದೊಂದಿಗೆ ನಗಿಸುತ್ತಲೇ ಪರರ ಸೊತ್ತಿಗೆ ಎಂದಿಗೂ ಆಸೆ ಪಡಬಾರದು ಎಂಬ ಮೌಲ್ಯವನ್ನು ದಾಟಿಸಿತು.

    ಒಬ್ಬ ಕ್ರಿಕೆಟ್ ಆಟಗಾರ ಮತ್ತು ಅಂಪೈರ್‌ನ ಪ್ರವೇಶದೊಂದಿಗೆ ಆರಂಭಗೊಂಡ ಇನ್ನೊಂದು ಹಾಸ್ಯ ಪ್ರಸಂಗವು ಆಧುನಿಕ ಆಟಗಳಿಂದ ದೇಸೀ ಆಟಗಳ ಸೊಗಡು ಹೇಗೆ ವಿಶಿಷ್ಠ ಎಂಬುದನ್ನು ನಿರೂಪಿಸಿತು. ಹಳ್ಳಿ ಆಟಗಳನ್ನು ದೂಷಿಸಿ ಉಡಾಫೆಯೊಂದಿಗೆ ಮಾತನಾಡುವ ನಗರದ ವ್ಯಕ್ತಿಯೊಂದಿಗಿನ ಸಂಭಾಷಣೆಯನ್ನು ರಸವತ್ತಾಗಿ ಪ್ರಸ್ತುತಪಡಿಸಿ ಹಳ್ಳಿಗಾಡಿನ ಆಟಗಳ ಪ್ರಾಮುಖ್ಯತೆಯನ್ನು ಬಿಂಬಿಸಿತು. ಜ್ಯೋತಿಷ್ಯದ ಕುರಿತ ಪ್ರಸಂಗವಂತೂ ನಂಬಿಕೆ ಮತ್ತು ಮೌಢ್ಯದ ನಡುವಿನ ವ್ಯತ್ಯಾಸಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು. ದೊಡ್ಡ ಸಾಧನೆಯ ಕನಸು ಕಂಡು ಜ್ಯೋತಿಷ್ಯವನ್ನಷ್ಟೇ ನಂಬುವ ಬದಲು ಸತತ ಪರಿಶ್ರಮದೊಂದಿಗೆ ತೊಡಗಿಕೊಂಡರೆ ವಿನೂತನ ಸಾಧನೆ ಸಾಧ್ಯವಾಗುತ್ತದೆ ಎಂದು ತಿಳಿಸಿಕೊಟ್ಟಿತು.

    Click here

    Click here

    Click here

    Click Here

    Call us

    Call us

    ಸುಂದರ್ ರೈ ಮಂದಾರ, ಕುಸಲ್ದ ಮುತ್ತು ಅರುಣ್ ಚಂದ್ರ ಬಿ.ಸಿ.ರೋಡ್ ಅವರ ತಂಡದಲ್ಲಿ ವಿನಾಯಕ ಜೆಪ್ಪು, ರಂಜನ್ ಬೋಳೂರು, ಪ್ರಜ್ವಲ್ ಅತ್ತಾವರ, ಸುರೇಶ್ ಸರಪಾಡಿ ಮತ್ತು ಕುಡ್ಲ ಕುಸಲ್ ತಂಡದಲ್ಲಿ ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ, ಅಶೋಕ್ ಬೇಕೂರು, ಝೀ ಕನ್ನಡ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಪಿಂಕಿ ರಾಣಿ ತಮ್ಮ ಹಾಸ್ಯ ನಟನೆಯ ಮೂಲಕ ನೆರೆದಿದ್ದ ಜನರನ್ನು ಮನರಂಜಿಸಿದರು. ರವಿ ಆಚಾರ್ಯ ಹಿನ್ನೆಲೆ ಸಂಗೀತ ನೀಡಿದರು.

    • ವರದಿ: ಶಶಿಧರ ನಾಯ್ಕ ಎ., ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆ
    SDM Ujire Students
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು

    21/05/2026

    ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

    20/05/2026

    ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ’ ಎಂಬ ವಿಚಾರ ಸಂಕಿರಣ

    30/04/2026
    Leave A Reply Cancel Reply

    five × five =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.