ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರೋಟರಿ ಕ್ಲಬ್ ಬೈಂದೂರು ವತಿಯಿಂದ ಸಮುದಾಯ ಆರೋಗ್ಯ ಕೇಂದ್ರ, ಬೈಂದೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿರೂರು ಇಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಜರುಗಿತು.
ರೋಟರಿ ವತಿಯಿಂದ ಎರಡೂ ಕಡೆಗಳಲ್ಲಿ ಲಸಿಕೆಯ ಮನೆ ಮನೆ ವಿತರಣೆಗಾಗಿ ವಾಹನದ ವ್ಯವಸ್ಥೆ ಹಾಗೂ ಸಿಬಂದಿಗಳಿಗೆ ಉಪಹಾರದ ವ್ಯವಸ್ಥೆಯನ್ನು ವತಿಯಿಂದ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಪ್ರಸಾದ ಪ್ರಭು, ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ., ಪೂರ್ವಾಧ್ಯಕ್ಷ ಐ ನಾರಾಯಣ ಹಾಗೂ ಹಿರಿಯ ಸದಸ್ಯರಾದ ಡಾ. ಎಮ್.ಎಸ್. ಶೆಟ್ಟಿ ಪಾಲ್ಗೊಂಡಿದ್ದರು.










