Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಾಡದೋಣೆ ಮೀನುಗಾರರ ಸಭೆ: ಬುಲ್‍ಟ್ರಾಲ್‍, ಲೈಟ್‍ ಫಿಶಿಂಗ್‍ ನಿಷೇಧಕ್ಕೆ ಸಚಿವರಿಗೆ ಮನವಿ
    ಊರ್ಮನೆ ಸಮಾಚಾರ

    ನಾಡದೋಣೆ ಮೀನುಗಾರರ ಸಭೆ: ಬುಲ್‍ಟ್ರಾಲ್‍, ಲೈಟ್‍ ಫಿಶಿಂಗ್‍ ನಿಷೇಧಕ್ಕೆ ಸಚಿವರಿಗೆ ಮನವಿ

    Updated:02/09/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು:
    ಬ್ಯೆಂದೂರು ವಲಯ ನಾಡದೋಣಿ ಮೀನುಗಾರರ ಸಂಘ, ಉಪ್ಪುಂದ ಮತ್ತು ಗಂಗೊಳ್ಳಿ  ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಇದರ ಜಂಟಿ ಆಶ್ರಯದಲ್ಲಿ ಶನಿವಾರ ಉಪ್ಪುಂದದಲ್ಲಿ ನಾಡದೋಣಿ ಮೀನುಗಾರರ ಸಭೆ ನಡೆಯಿತು.

    Click Here

    Call us

    Click Here

     ಮಂಗಳೂರಿನಿಂದ ಕಾರವಾರದ ತನಕ  ಇರುವ ನಾಡದೋಣಿ ಮೀನುಗಾರರ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು, ಮೀನು ಮರಿ ಸಂತತಿಗಳು ನಾಶವಾಗುವಂಥ ಅವೈಜ್ಞಾನಿಕ ಮೀನುಗಾರಿಕೆಯಾದ ಬುಲ್‍ಟ್ರಾಲ್‍ ಮತ್ತು ಬೆಳಕು ಮೀನುಗಾರಿಕೆ ನಿಷೇಧ ಮಾಡಬೇಕೆಂಬ ಒಮ್ಮತದ ಅಭಿಪ್ರಾಯಕ್ಕೆ ಬಂದಿರುತ್ತಾರೆ.

    ಅದೇ ದಿನ ಮಧ್ಯಾಹ್ನ ಭಟ್ಕಳ ತಾಲೂಕು ಕಛೇರಿಯಲ್ಲಿ ಮಾನ್ಯ ಮೀನುಗಾರಿಕಾ ಸಚಿವ ಎಸ್. ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ, ಮೀನು ಮರಿ ಸಂತತಿಗಳು ನಾಶವಾಗುವಂತಹ ಅವೈಜ್ಞಾನಿಕ ಮೀನುಗಾರಿಕೆಯಾದ ಬುಲ್‍ಟ್ರಾಲ್‍ ಮತ್ತು ಬೆಳಕು ಮೀನುಗಾರಿಕೆಯನ್ನು ನಿಷೇಧ ಮಾಡಬೇಕೆಂಬ ಮನವಿಯನ್ನು ಸಲ್ಲಿಸಲಾಯಿತು.

    ಮನವಿಯನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿದ ಸಚಿವರು ಒಂದು ತಿಂಗಳೊಳಗೆ ಈ ವಿಚಾರಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಮತ್ತು ಎಲ್ಲಾ ಮೀನುಗಾರರ ಸಂಘಟನೆಯ ಮುಖಂಡರನ್ನು ಕರೆಸಿ ಸಭೆ ನಡೆಸಿ ಇದಕ್ಕೊಂದು ಸೂಕ್ತ ಪರಿಹಾರವನ್ನು ದೊರಕಿಸಿ ಕೊಡುತ್ತೇನೆಂದು ಭರವಸೆ  ನೀಡಿದರು.

    ಈ ಸಭೆಯಲ್ಲಿ ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ನಾಗೇಶ್ ಖಾರ್ವಿ, ಕರಾವಳಿ ಸಾಂಪ್ರದಾಯಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಯಶವಂತ ಖಾರ್ವಿ, ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಗೌರವಾಧ್ಯಕ್ಷರಾದ ಎಸ್. ಮದನ್ ಕುಮಾರ್ ಉಪ್ಪುಂದ, ನವೀನ್ ಚಂದ್ರ ಉಪ್ಪುಂದ, ದಕ್ಷಿಣ ಕನ್ನಡ ಮಂಗಳೂರು ನಾಡ ದೋಣಿ ಮೀನುಗಾರರ ಮುಖಂಡರಾದ ವಸಂತ ಖಾರ್ವಿ,  ಅಶ್ವಥ್ ಕಾಂಚನ್, ಯಾದವ ಸಾಲಿಯಾನ್‍, ಉದಯ ಅಮೀನ್, ಹೆಜಮಾಡಿ ನಾಡ ದೋಣಿ ಮೀನುಗಾರರ ಮುಖಂಡರಾದ ಏಕನಾಥ್ ಕರ್ಕೇರ್, ಮುಕುಂದ ಕುಂದರ್, ಉತ್ತರ ಕನ್ನಡ ನಾಡ ದೋಣಿಯ ಮೀನುಗಾರರ ಮುಖಂಡರಾದ ನಾಗರಾಜ, ಮಂಜುನಾಥ ಖಾರ್ವಿ, ಅಣ್ಣಪ್ಪ ಸೋಮ ಖಾರ್ವಿ, ಸೋಮನಾಥ ಮೊಗೇರ, ನಾಗರಾಜ ಹರಿಕಾಂತ್, ಬಲಿಂದ್ರ ಅಳ್ವೆಗೆದ್ದೆ ಶಿರೂರು, ಅಲ್ಪಸಂಖ್ಯಾತರ ನಾಡ ದೋಣಿ ಮೀನುಗಾರರ ಮುಖಂಡರಾದ ಗಂಗೊಳ್ಳಿ ಅಬ್ದುಲ್ ಅಜೀದ್, ಮರವಂತೆ ಮೀನುಗಾರರ ಮುಖಂಡರಾದ ಸುರೇಶ್ ಖಾರ್ವಿ, ವಾಸುದೇವ್ ಖಾರ್ವಿ, ಶಂಕರ ಎಂ. ಖಾರ್ವಿ ಶೇಖರ್ ಟಿ. ಖಾರ್ವಿ, ಉಪ್ಪುಂದ ಮೀನುಗಾರರ ಮುಖಂಡರಾದ ವೆಂಕಟರಮಣ ಖಾರ್ವಿ, ತಿಮ್ಮಪ್ಪ ಖಾರ್ವಿ, ಬಿ. ರಾಮ ಖಾರ್ವಿ, ನಾಗೇಶ ಖಾರ್ವಿ ಮಡಿಕಲ್, ಮಂಜುನಾಥ ಜಿ. ಖಾರ್ವಿ, ಸುಧಾಕರ ಖಾರ್ವಿ, ಮಹೇಶ್ ನಾವುಂದ ಮತ್ತು ನಾಡದೋಣಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

    Click here

    Click here

    Click here

    Click Here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    4 × 2 =

    Call us

    Click Here

    Call us

    Call us

    Call us
    Highest Viewed Recently
    • ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ
    • ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.