ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ನಿವಾಸಿ ರೈನಿಶ್ ರಿಹಾನ್ (33) ಮದ್ಯಪಾನಕ್ಕೆ ತಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದಾನೆ.
ಅವನು ಮದ್ಯಪಾನದ ಚಟ ಹೊಂದಿದ್ದು, ತಾಯಿಯಲ್ಲಿ ಆಗಾಗ ಹಣ ಕೇಳಿ ಗಲಾಟೆ ಮಾಡುತ್ತಿದ್ದ. ಅ.29ರಂದು ತಲ್ಲೂರಿನ ಪಾರ್ತಿಕಟ್ಟೆ ಎಂಬಲ್ಲಿರುವ ಮನೆಯಿಂದ ಗಲಾಟೆ ಮಾಡಿ ಹೋಗಿದ್ದ. ನ.8ರಂದು ಕುಂದಾಪುರ ಸರಕಾರಿ ಆಸ್ಪತ್ರೆಯಿಂದ ತಾಯಿಗೆ ಕರೆ ಬಂದಿದ್ದು ಇಲಿ ಪಾಷಾಣ ಸೇವಿಸಿರುವುದಾಗಿ ವೈದ್ಯರು ತಿಳಿಸಿದ್ದರು. ನಂತರ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಸಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.
ಮೃತನ ತಾಯಿ ಸ್ಟೆಲ್ಲಾ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









