Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬರಹಗಾರ ಪದ್ಮರಾಜ ದಂಡಾವತಿ ಅವರಿಗೆ ಕ್ರಿಯೇಟಿವ್ ಪುಸ್ತಕ ಮನೆ-2024 ಪ್ರಶಸ್ತಿ, 6 ಕೃತಿಗಳ ಬಿಡುಗಡೆ
    ಊರ್ಮನೆ ಸಮಾಚಾರ

    ಬರಹಗಾರ ಪದ್ಮರಾಜ ದಂಡಾವತಿ ಅವರಿಗೆ ಕ್ರಿಯೇಟಿವ್ ಪುಸ್ತಕ ಮನೆ-2024 ಪ್ರಶಸ್ತಿ, 6 ಕೃತಿಗಳ ಬಿಡುಗಡೆ

    Updated:16/12/2024No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಪುಸ್ತಕ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತಿರುವ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ 6 ಪುಸ್ತಕಗಳ ಅನಾವರಣ ಹಾಗೂ ’ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ-2024ರ’ ಪ್ರದಾನ ಸಮಾರಂಭದಲ್ಲಿ ಖ್ಯಾತ ಬರಹಗಾರ ಪದ್ಮರಾಜ್ ದಂಡಾವತಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    Click Here

    Call us

    Click Here

    ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀಕೃಷ್ಣರಾಜ ಪರಿಷತ್ ಮಂದಿರದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ಜೋಗಿ, ಬಿ. ಆರ್. ಲಕ್ಷ್ಮಣ್ ರಾವ್, ಡಾ. ನಾ.ಸೋಮೇಶ್ವರ ಅವರು 6 ಪುಸ್ತಕಗಳನ್ನು ಬಿಡುಗಡೆ ಮಾಡಿದರು.

    ಕ್ರಿಯೇಟಿವ್ ಕಾಲೇಜು ಹಾಗೂ ಪುಸ್ತಕ ಮನೆ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್ ಎಲ್ ಪ್ರಾಸ್ತವಿಕ ಮಾತನಾಡಿ, ಕರಾವಳಿಯಿಂದ ರಾಜಧಾನಿಗೆ ನಮ್ಮ ಪುಸ್ತಕ ಪಯಣಕ್ಕೆ ಇದು ಸಂಭ್ರಮದ ಕ್ಷಣ. ಪುಸ್ತಕ ಮನೆಯನ್ನು ರಾಜ್ಯ ಮಟ್ಟಕ್ಕೆ ತರುವ ಜತೆಗೆ ಪುಸ್ತಕ ಓದುವ ಬೆಳೆಸುವ, ಯುವ ಜನತೆಗೆ ಪುಸ್ತಕವನ್ನು ಓದುವ ಬೆಳೆಸುವ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಶಿಕ್ಷಣದ ಜತೆ ಜತೆಗೆ ಸಾಂಸ್ಕೃತಿಕ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚು ಮೌಲ್ಯ ಕೊಟ್ಟಿದ್ದೇವೆ. 20 ಸಾವಿರ ಕೃತಿಗಳನ್ನು ಓದುಗರ ಕೈ ತಲುಪಿಸುವ ಕೆಲಸ ಮಾಡಿದ್ದೇವೆ. ಹೊಸ ಓದುಗರನ್ನು ಸೃಷ್ಟಿ ಮಾಡಬೇಕು. ಬದುಕಿನಲ್ಲಿ ಮಕ್ಕಳು ಗೆಲ್ಲಬೇಕಾದರೆ ಪುಸ್ತಕ ಓದುವ ಹವ್ಯಾಸ ಹೆಚ್ಚಬೇಕು ಎಂದರು.

    ಕನ್ನಡದ ಖ್ಯಾತ ಬರಹಗಾರ ಜೋಗಿ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಆಧುನಿಕತೆಯ ವೇಗದಲ್ಲಿ ಯುವಜನತೆ ಮೊಬೈಲ್ ಅಲ್ಲಿ ಮುಳುಗಿದ್ದಾರೆ. ಕ್ರಿಯೇಟಿವ್ ಕಾಲೇಜು ಶಿಕ್ಷಣದ ಜತೆಗೆ ಬದುಕುವುದನ್ನು ಕಲಿಸುವ ಶಿಕ್ಷಣ ನೀಡುವ ಜತೆಗೆ ಜೀವನದಲ್ಲಿ ಸಾಧನೆ ಮಾಡಲು ಅವಕಾಶ ಕೊಟ್ಟಿದೆ. ಪುಸ್ತಕ ಮನೆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕಾಣಿಕೆ ನೀಡುತ್ತಿದೆ.ಜೀವನದಲ್ಲಿ ಎಲ್ಲಾ ಅವಕಾಶ ಇದೆ. ನಮಗೆ ಆಯ್ಕೆ ಇರಬೇಕು. ಇಂದು ಇನ್ನೊಬ್ಬರ ಅಭಿಪ್ರಾಯದ ಮೇಲೆ ಬದುಕು ಓಡುತ್ತಿದೆ. ಪದ್ಮರಾಜ ದಂಡಾವತಿ ಅವರಿಗೆ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ -2024 ಪ್ರಶಸ್ತಿ ಇಡೀ ಪತ್ರಕರ್ತ ವಲಯಕ್ಕೆ ಸಂದ ಗೌರವ ಎಂದರು.

    ಖ್ಯಾತ ಲೇಖಕ ಪದ್ಮರಾಜ್ ದಂಡಾವತಿ ಮಾತನಾಡಿ, ನಾನು ಈ ವರ್ಷ ಬರೆದ ಪುಸ್ತಕಕ್ಕೆ ಪ್ರಶಸ್ತಿ ಬಂದಿದೆ. ಮೊಬೈಲ್ ಬಳಕೆ ಅತಿಯಾದ ಕಾರಣದಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವ ಜನತೆಯ ಯೋಚನೆ ಬದಲಿಸಲು ಕ್ರಿಯೇಟಿವ್ ಪುಸ್ತಕ ಮನೆ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ ಎಂದರು.

    Click here

    Click here

    Click here

    Call us

    Call us

    ಖ್ಯಾತ ವಿಮರ್ಶಕ, ಸಾಹಿತಿ ರಾಜಶೇಖರ್ ಹಳೆಮನೆ 6 ಕೃತಿಗಳ ಪರಿಚಯ ಮಾಡಿಕೊಡುವ ಜತೆಗೆ ಕೃತಿಕಾರರ ಬಗ್ಗೆ ಮಾತುಗಳನ್ನಾಡಿ ಎಲ್ಲಾ ಕೃತಿಗಳ ಮಹತ್ವವನ್ನು ವಿವರಿಸಿದರು.

    ಕನ್ನಡದ ಖ್ಯಾತ ಬರಹಗಾರ ಜೋಗಿ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಅಧುನಿಕತೆಯ ವೇಗದಲ್ಲಿ ಮಕ್ಕಳು ಪಿಯುಸಿ  ಗೆ ಬಂದ ಮೇಲೆ ಮಕ್ಕಳಿಗೆ ಎಲ್ಲವನ್ನು ಬಿಡಿಸುತ್ತಾರೆ. ಆದರೆ ಕ್ರಿಯೇಟಿವ್ ಕಾಲೇಜು ಶಿಕ್ಷಣದ ಜತೆಗೆ ಬದುಕುವುದನ್ನು ಕಲಿಸುವ ಶಿಕ್ಷಣ ನೀಡುವ ಜತೆಗೆ ಜೀವನದಲ್ಲಿ ಸಾಧನೆ ಮಾಡಲು ಅವಕಾಶ ಕೊಟ್ಟಿದೆ. ಪುಸ್ತಕ ಮನೆ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಕಾಣಿಕೆ ನೀಡುತ್ತಿದೆ.

    ಜೀವನದಲ್ಲಿ ಎಲ್ಲಾ ಅವಕಾಶ ಇದೆ. ನಮಗೆ ಆಯ್ಕೆ ಇರಬೇಕು. ಇಂದು ಇನ್ನೊಬ್ಬರ ಅಭಿಪ್ರಾಯದ ಮೇಲೆ ಬದುಕು ಓಡುತ್ತಿದೆ. ಪದ್ಮರಾಜ ದಂಡಾವತಿ ಅವರಿಗೆ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ -2024 ಪ್ರಶಸ್ತಿ ಇಡೀ ಪತ್ರಕರ್ತ ವಲಯಕ್ಕೆ ಸಂದ ಗೌರವ ಎಂದರು.

    ಕಾರ್ಯಕ್ರಮದ ಮುಖ್ಯ ಅತಿಥಿ ವೈದ್ಯ, ಸಾಹಿತಿ ಡಾ. ನಾ.ಸೋಮೇಶ್ವರ ಅವರು ಮಾತನಾಡಿ, ಕನ್ನಡದ ಹಿರಿಯ, ಕಿರಿಯ ಬರಹಗಾರರ ಪುಸ್ತಕ ಪ್ರಕಟ ಮಾಡುವ ಜತೆಗೆ ಪುಸ್ತಕ ಮನೆ ನಾಡಿಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಯಾವ ಕ್ಷೇತ್ರದಲ್ಲಿ ಪುಸ್ತಕಗಳು ಹೊರ ಬಂದಿಲ್ಲ,ಆ ವಿಷಯದ ಪುಸ್ತಕ ತರಲು ಪ್ರಯತ್ನ ಮಾಡಬೇಕು. ಪ್ರತಿ ಜಿಲ್ಲೆ, ಪ್ರತಿ ತಾಲೂಕಿಗೆ ಪುಸ್ತಕ ಮನೆ ಪಯಣ ಸಾಗಬೇಕು. ಕನ್ನಡ ಪುಸ್ತಕ, ಸಾಹಿತ್ಯ, ನಾಡು ನುಡಿಗೆ ಕೊಡುಗೆ ನೀಡುತ್ತಿರುವ ಕ್ರಿಯೇಟಿವ್ ಪುಸ್ತಕ ಮನೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

    ಸಾಹಿತಿ ಬಿ. ಆರ್. ಲಕ್ಷಣರಾವ್ ಮಾತನಾಡಿ, ಕ್ರಿಯೇಟಿವ್ ಕಾಲೇಜಿನ ಕಾರ್ಕಳ, ಹಾಸನ ವಿದ್ಯಾರ್ಥಿಗಳ ಶಿಸ್ತು, ಕಾಲೇಜು ನೋಡಿ ಸಂತಸವಾಗಿತ್ತು. ಅಲ್ಲಿನ ಯುವ ತಂಡ ಇಡೀ ರಾಜ್ಯದಲ್ಲೇ ಮಾದರಿಯಾಗಿದೆ. ಪುಸ್ತಕ ಪ್ರಕಟಣೆ ಎಂಬುದು ಕಷ್ಟಕರವಾಗಿತ್ತು. ಅಕ್ಷರ ಪ್ರಕಾಶನ ಎಂಬುದು ನಮ್ಮೆಲ್ಲರ ಹೆಮ್ಮೆ. ಗುಣಮಟ್ಟದ ಹಾಗೂ ಇಂದಿನ ಸಮಾಜಕ್ಕೆ ಬೇಕಾದ, ಎಲ್ಲಾ ವಲಯದ ಓದುಗರ ಪುಸ್ತಕ ಪ್ರಕಾಶನ ಮತ್ತು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇಂದಿನ ಕಾಲದಲ್ಲಿ ಪುಸ್ತಕ ಮನೆ ಪ್ರಕಾಶನ ದೊಡ್ಡ ಹೆಜ್ಜೆ ಇಟ್ಟಿದೆ ಎಂದರು.

    ಉಡುಪಿ ಕ್ರಿಯೇಟಿವ್ ಕಾಲೇಜು ಪ್ರಾಂಶುಪಾಲರಾದ ರಾಮಕೃಷ್ಣ ಹೆಗಡೆ ಅವರ ಕವನ ವಾಚನದ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಕೃತಿಕಾರರಾದ ಕೆ. ಸತ್ಯನಾರಾಯಣ್, ಡಿ.ಎಸ್.ಚೌಗಲೆ, ನರೇಂದ್ರ ರೈ ದೇರ್ಲ, ಡಾ.ಲಕ್ಷ್ಮಣ ವಿ.ಎ. ಹಾಜರಿದ್ದರು.

    ಖ್ಯಾತ ಕಾದಂಬರಿಕಾರ ಅನು ಬೆಳ್ಳೆ ಅವರು ಸ್ವಾಗತಿಸಿದರು. ಲೋಹಿತ್  ಎಸ್. ಕೆ. ಅವರು ನಿರೂಪಿಸಿದರು.

    ಕೃತಿಗಳ ಅನಾವರಣ:
    ಅಂಪೈರ್ ಮೇಡಂ (ಕಾದಂಬರಿ), ವಾರಸಾ (ಕಥಾ ಸಂಕಲನ), ಹಸಿರು ಅಧ್ಯಾತ್ಮ (ಲೇಖನಗಳು), ದೇಹಿ(ಕಾದಂಬರಿ), ಕಾವ್ಯ ಸಂಭವ (ಕವಿಯ ಟಿಪ್ಪಣಿ ಪುಸ್ತಕ) ಹಾಗೂ ಪಿಎಚ್‌ಸಿ ಕವಲುಗುಡ್ಡ (ಕಾದಂಬರಿ) ಬಿಡುಗಡೆಗೊಂಡವು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ

    17/12/2025

    ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ

    17/12/2025

    ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌

    17/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ
    • ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕೆ. ನಾರಾಯಣ ಖಾರ್ವಿ ನಿಧನ 

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.