ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಜ್ರಿ ಮಾನಂಜೆ, ಕಮಲಶಿಲೆ ಅಲ್ಲಿ ನೆರವೇರಿತು.
ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀಧರ ಅಡಿಗ ಅವರು ಶಿಬಿರವನ್ನು ಉದ್ಘಾಟಿಸಿ ಶಿಬಿರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶಿಬಿರಕ್ಕೆ ಶುಭಹಾರೈಸಿದರು.
ತದನಂತರ ಹಂದಿಮನೆ ರಾಜೀವ ಶೆಟ್ಟಿ ಅವರು ವಾರ್ಷಿಕ ವಿಶೇಷ ಶಿಬಿರದ ಲೋಗೋ ವನ್ನು ಅನಾವರಣ ಗೊಳಿಸಿ ಭೌತಿಕ, ದೈಹಿಕ ಶ್ರಮದ ಮಹತ್ವವನ್ನು ತಿಳಿಸಿ ಶಿಬಿರ ಯಶಸ್ವಿಯಾಗಲೆಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ಏನ್. ಎಸ್. ಎಸ್. ಶಿಬಿರದ ಧ್ಯೇಯೋದ್ದೇಶಗಳನ್ನು ತಿಳಿಸಿ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸತ್ಯನಾರಾಯಣ ಹತ್ವಾರ್, ಕಾಲೇಜಿನ ಕಛೇರಿ ಪ್ರಬಂಧಕರಾದ ಗೋಪಾಲ ನಾಯ್ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಗೌರಿ ಬಾಯಿ, ಏನ್. ಎಸ್. ಎಸ್. ಯೋಜನಾಧಿಕಾರಿಗಳಾದ ಅರುಣ್ ಎ. ಎಸ್. ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಸಮೀಕ್ಷಾ ಶೆಟ್ಟಿ ವಂದಿಸಿದರು. ಲತಿಕಾ ಡಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.















