ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರಗ ಸಮುದಾಯದ ಯುವಜನರಿಗೆ ನೇರ ನೇಮಕಾತಿ ಮೂಲಕ ಸರಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಇತ್ತೀಚಿಗೆ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಯಿತು.
ಈ ಸಂದರ್ಭ ವಿದ್ಯಾವಂತ ನಿರುದ್ಯೋಗಿ ಯುವ ಸಮುದಾಯದೊಂದಿಗೆ ಮುಖ್ಯಮಂತ್ರಿ ಮಾತುಕತೆ ಮಾಡಿದರು. ಇನ್ನಿತರ ಬೇಡಿಕೆಗಳಾದ ಕೃಷಿ ಭೂಮಿ, ಆರೋಗ್ಯ ಸಹಿತ ಪ್ರಮುಖ ವಿಚಾರಗಳನ್ನು ಚರ್ಚಿಸಿದರು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಲಾಯಿತು.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಣದೀಪ್, ಎಸ್ಸಿ-ಎಸ್ಟಿ ಕೋಶದ ನಿರ್ದೇಶಕರಾದ ಊರ್ಮಿಳಾ, ಬುಡಕಟ್ಟು ಕಲ್ಯಾಣ ಇಲಾಖೆಯ ನಿರ್ದೇಶಕ ಕೆ. ಯೋಗಿಶ್ ಅವರನ್ನು ಭೇಟಿಯಾಗಿ ಕೊರಗ ಸಮುದಾಯದ ಚರ್ಚಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ಉಪಾಧ್ಯಕ್ಷೆ ಪವಿತ್ರ, ಸಂಯೋಜಕರಾದ ಪುತ್ರ ಕೆ., ಮುಖಂಡರಾದ ಬೋಗ್ರ ಕೊಕ್ಕರ್ಣೆ, ಶೀನ ಕಾಂಜರಕಟ್ಟಿ, ನರಸಿಂಹ ಪೆರ್ಡೂರು, ಲೀಲಾ ಕಾಪು, ಸಮುದಾಯದ ಯುವಜನರಾದ ಪ್ರೀತಿ, ಸುಪ್ರಿಯಾ, ಪ್ರತೀಕ್ಷಾ, ರಕ್ಷಿತಾ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು










