ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಒಕ್ಕೂಟ ಮತ್ತು ಪಾಂಡೇಶ್ವರ ವಲಯ ಶೌರ್ಯ ಆಶ್ರಯದಲ್ಲಿ ರುದ್ರ ಭೂಮಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ರುದ್ರ ಭೂಮಿ ಅಭಿವೃದ್ಧಿಯ ಸಮಿತಿ ಕಾರ್ಯದರ್ಶಿ ಪ್ರತಾಪ್ ಶೆಟ್ಟಿ ಸಾಸ್ತಾನ ಚಾಲನೆ ನೀಡಿದರು.
ಈ ಸಂದಭರ್ಭದಲ್ಲಿ ಪಾಂಡೇಶ್ವರ ಗ್ರಾ.ಪಂ ಸದಸ್ಯೆ ಸುಜಾತ ವೆಂಕಟೇಶ್ ಪೂಜಾರಿ, ಪಾಂಡೇಶ್ವರ ವಲಯದ ಶೌರ್ಯ ಟೀಮ್‌ನ ಸದಸ್ಯರಾದ ಕಾಳಿಂಗ ಪೂಜಾರಿ, ರವಿ ಪೂಜಾರಿ, ನಾಗೇಶ್, ರಾಜೇಶ್ ಸಾಸ್ತಾನ, ಚಂದ್ರ ಆಚಾರ್ಯ, ಸುರೇಶ್, ಸತೀಶ್, ರೇಣುಕಾ, ಯಶೋಧ, ಘಟಕ ಸೇವಾ ಪ್ರತಿನಿಧಿ ಶೋಭಾ ಮತ್ತು ಪಾಂಡೇಶ್ವರ ಒಕ್ಕೂಟದ ಸದಸ್ಯರಾದ ವಿಶ್ವನಾಥ್ ಆಚಾರ್ಯ, ವೆಂಕಟೇಶ್, ವಿಜಯ್, ನಾಗೇಂದ್ರ, ಚಂದ್ರ, ಪಾರ್ವತಿ ಮತ್ತು ಸೇವಾ ಪ್ರತಿನಿಧಿ ಅಕ್ಷಯ ಹಾಗೂ ಮಂಜುನಾಥ್, ಯೋಗೀಶ್, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮಿ ಉಪಸ್ಥಿತರಿದ್ದರು.










