ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ಇದರ 2025-26ನೇ ಸಾಲಿಗೆ ಅಧ್ಯಕ್ಷರಾಗಿ ಕೃಷ್ಣ ಪೂಜಾರಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ರಾಮನಾಥ ಚಿತ್ತಾಲ್, ಉಪಾಧ್ಯಕ್ಷರಾಗಿ ಉದಯಶಂಕರ ರಾವ್, ಜತೆ ಕಾರ್ಯದರ್ಶಿಯಾಗಿ ಗೋಪಾಲ ಬಿಲ್ಲವ, ಖಜಾಂಚಿ ಜನಾರ್ದನ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಚಂದ್ರಕಲಾ ತಾಂಡೇಲ, ಕ್ಲಬ್ ಲರ್ನಿಂಗ್ ಫೆಸಿಲಿಟಿಸ್ ಎಚ್. ಗಣೇಶ ಕಾಮತ್, ಸಾರ್ಜಂಟ್ ಅಟ್ ಆರ್ಮ್ಸ್ ಬಿ. ಲಕ್ಷ್ಮೀಕಾಂತ ಮಡಿವಾಳ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಮಾಲಾಶ್ರೀ ಖಾರ್ವಿ, ವೊಕೆಶನಲ್ ಸರ್ವಿಸ್ ಗಿರೀಶ್ ಖಾರ್ವಿ, ಕಮ್ಯುನಿಟಿ ಸರ್ವಿಸ್ ರಾಮನಾಥ ನಾಯಕ್, ಇಂಟರ್ ನ್ಯಾಶನಲ್ ಸರ್ವಿಸ್ ರಾಘವೇಂದ್ರ ಮೇಸ್ತ, ಯೂತ್ ಸರ್ವಿಸ್ ಸುಗುಣ ಆರ್.ಕೆ., ಚೇರ್‌ಮೆನ್‌ಗಳಾಗಿ ಉಮೇಶ ಮೇಸ್ತ, ರಾಜೇಶ ಎಂ.ಜಿ., ದಿನಕರ ಶೆಣೈ ಟಿ., ಪ್ರದೀಪ್ ಡಿ.ಕೆ., ನಾಗೇಂದ್ರ ಪೈ, ವಾಸುದೇವ ಶೇರುಗಾರ್, ನಾರಾಯಣ ಇ.ನಾಯ್ಕ್ ಆಯ್ಕೆಯಾಗಿದ್ದಾರೆ.










