Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಹೆಬ್ರಿಯಲ್ಲಿ ಸಂಭ್ರಮ ಸಡಗರದ ಕೊರಗರ ಭೂಮಿ ಹಬ್ಬ
    ಊರ್ಮನೆ ಸಮಾಚಾರ

    ಹೆಬ್ರಿಯಲ್ಲಿ ಸಂಭ್ರಮ ಸಡಗರದ ಕೊರಗರ ಭೂಮಿ ಹಬ್ಬ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ರಿ. ಕರ್ನಾಟಕ – ಕೇರಳ ವತಿಯಿಂದ ಸೋಮವಾರ 18ನೇ ವರ್ಷದ ಕೊರಗರ ಭೂಮಿ ಹಬ್ಬ ಹೆಬ್ರಿ ಬಡಾಗುಡ್ಡೆ ಸಮುದಾಯ ಭವನದಲ್ಲಿ ಆಚರಿಸಲಾಯಿತು.

    Click Here

    Call us

    Click Here

    ಹೆಬ್ರಿ ಬಸ್ ನಿಲ್ದಾಣದಿಂದ ಬಡಾಗುಡ್ಡೆ ಸಮುದಾಯ ಭವನಕ್ಕೆ ಹೊರಟ ಕಾಲ್ನಡಿಗೆ ಜಾಥಕ್ಕೆ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ತಾರನಾಥ ಬಂಗೇರರವರು ಡೋಲು ಬಾರಿಸುವುದರೊಂದಿಗೆ ಚಾಲನೆ ನೀಡಿ, ಭೂಮಿ ಹಬ್ಬಕ್ಕೆ ಶುಭವನ್ನು ಕೋರಿದರು.

    ಜಾಥದಲ್ಲಿ ಡೋಲು, ಚೆಂಡೆ, ಕೊಳಲು ವಾದನಕ್ಕೆ ಮಕ್ಕಳು, ಮಹಿಳೆಯರು, ಯುವಜನರು, ವಯಸ್ಕರು ಸಂಭ್ರಮದಿಂದ ಕುಣಿದಾಡಿದರು. ಸುರಿಯುವ ಮಳೆಯನ್ನು ಲೆಕ್ಕಿಸದೆ ʼಆದಿವಾಸಿ ಕೀ ಜೈʼ, ʼಬಿರ್ಸ ಮುಂಡರಿಗೆ ಜೈʼ, ʼಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟಕ್ಕೆ ಜೈʼ ಎಂದು ಘೋಷಣೆ ಕೂಗುತ್ತ ಹೊರಟರು. ಬಡಾಗುಡ್ಡೆ ಸಮುದಾಯ ಭವನದ ಮುಂಭಾಗದಲ್ಲಿ ಭೂಮಿ ಹಬ್ಬದ ಧ್ವಜಾರೋಹಣವನ್ನು ಸಮುದಾಯದ ಮುಖಂಡರಾದ ಬೊಗ್ರ ಕೊಕ್ಕರ್ಣೆರವರು ನೆರವೇರಿಸಿ ಭೂಮಿ ಹಬ್ಬದ ಮಹತ್ವ ಮತ್ತು ವಿಶೇಷತೆಯನ್ನು ಸಾರಿದರು.

    ನಂತರ ಕಾರ್ಯಕ್ರಮದಲ್ಲಿ ಭಾಗಿಯಾದ ಸಮುದಾಯ ಬಾಂಧವರೆಲ್ಲರಿಗೂ ಸಮುದಾಯದ ಐಕ್ಯತೆ ಮತ್ತು ಬಾಂಧವ್ಯದ ದ್ಯೋತಕವಾಗಿ ಲಕ್ಷ್ಮಿ ಕೆಂಜೂರು ಹಾಗೂ ಅಮ್ಮಣ್ಣಿ ಅಬ್ಲಿಕಟ್ಟೆ ಅವರು ಸವಿ ಜೇನನ್ನು ವಿತರಿಸಿದರು. ವಿಶಾಲಾಕ್ಷಿ ಮತ್ತು ಶಾರದ ಹೆಬ್ರಿ ದೀಪ ಬೆಳಗಿಸಿ ಭೂಮಿ ಹಬ್ಬವನ್ನು ಉದ್ಘಾಟಿಸಿದರು. ಸುಪ್ರೀತಾ ಮತ್ತು ತಂಡದವರು ಧ್ಯೆಯಗೀತೆಯನ್ನು ಹಾಡಿದರು.

    ಭೂಮಿ ಹಬ್ಬವನ್ನು ಉದ್ಘಾಟಿಸಿದ ನಂತರ ಒಕ್ಕೂಟದ ಸಂಯೋಜಕರು ಕೆ. ಪುತ್ರನ್ ಹಬ್ಬದ ಸಂದೇಶ ನೀಡಿದರು.

    Click here

    Click here

    Click here

    Click Here

    Call us

    Call us

    ಮುಖ್ಯ ಅತಿಥಿಯಾಗಿ ಆಗಮಿಸಿದ ಯೋಜನಾ ಸಮನ್ವಯ ಅಧಿಕಾರಿ ಎಂ. ನಾರಾಯಣ ಸ್ವಾಮಿ ಭೂಮಿ ಹಬ್ಬದ ಕುರಿತು ಮಾತನಾಡಿದರು. ಕೊರಗ ಸಮುದಾಯದ ಯುವಜನರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಸಮುದಾಯ ಬಾಂಧವರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡರವರು ಸಮುದಾಯ ಬೆಳೆದು ಬಂದ ಬಗ್ಗೆ ಹಾಗೂ ಸಮುದಾಯದ ವಾಸ್ತವ್ಯದ ಕುರಿತು ಮಾತನಾಡಿದರು.

    ಸಮಾರಂಭದ ವೇದಿಕೆಯಲ್ಲಿ ಯೋಜನಾ ಸಮನ್ವಯ ಅಧಿಕಾರಿ ಎಂ. ನಾರಾಯಣ ಸ್ವಾಮಿ, ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ,  ಬೊಗ್ರ ಕೊಕ್ಕರ್ಣೆ, ಹೆಬ್ರಿ ಸಂಘದ ಅಧ್ಯಕ್ಷೆ ಉಷಾ ಹೆಬ್ರಿ,  ವಿಶಾಲಾಕ್ಷಿ ಹೆಬ್ರಿ ಮತ್ತು ಶಾರದಾ ಹೆಬ್ರಿ ಉಪಸ್ಥಿತರಿದ್ದರು.

    ಮಧ್ಯಾಹ್ನದ ಊಟದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಭೂಮಿ ಹಬ್ಬಕ್ಕೆ ಆಗಮಿಸಿದ ಸಮುದಾಯದ ಬಾಂಧವರೆಲ್ಲರೂ ಸೇರಿ ಡೋಲು ವಾದನಕ್ಕೆ ಕುಣಿದು ಕುಪ್ಪಳಿಸಿದರು.

    ಕಾರ್ಯಕ್ರಮವನ್ನು ವಿಮಲ ಕಳ್ತೂರು ನಿರೂಪಿಸಿ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕರಾದ ಕೆ. ಪುತ್ರನ್ ಹೆಬ್ರಿ ಸ್ವಾಗತಿಸಿ, ಸಮುದಾಯ ಕಾರ್ಯಕರ್ತರಾದ ಸುಪ್ರಿಯ ಎಸ್. ಕಿನ್ನಿಗೋಳಿ ಧನ್ಯವಾದ ಗೈದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸಿದ್ಧಾಪುರ: ಚಿರತೆಯನ್ನು ಗುಂಡಿಟ್ಟು ಕೊಂದು ಪ್ರಕರಣದಲ್ಲಿ ನಾಲ್ವರ ಬಂಧನ

    22/05/2026

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026
    Leave A Reply Cancel Reply

    2 × two =

    Call us

    Click Here

    Call us

    Call us

    Call us
    Highest Viewed Recently
    • ಸಿದ್ಧಾಪುರ: ಚಿರತೆಯನ್ನು ಗುಂಡಿಟ್ಟು ಕೊಂದು ಪ್ರಕರಣದಲ್ಲಿ ನಾಲ್ವರ ಬಂಧನ
    • ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.