ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿ. ಇದರ ನಿರ್ದೇಶಕರಾಗಿ ಬೈಂದೂರಿನ ಭೀಮೇಶ್ ಕುಮಾರ್ ಎಸ್. ಜಿ ಆಯ್ಕೆಯಾಗಿದ್ದಾರೆ.
ಅವರು ಬೈಂದೂರಿನ ಕಾಮಾಕ್ಷಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭೀಮೇಶ್ ಅವರು ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ಬೈಂದೂರಿನಲ್ಲಿ ಮಹಾವೀರ ಡೆವಲಪರ್ಸ್ ಮೂಲಕ ಮೊದಲ ಭಾರಿಗೆ ಮಹಾವೀರ ವಸತಿ ಸಮುಚ್ಛಯವನ್ನು ನಿರ್ಮಿಸಿದ್ದರು. ಇವರೊಂದಿಗೆ ಪುಣ್ಯಶ್ರೀ ಕನ್‌ಸ್ಟ್ರಕ್ಷನ್ಸ್ ಹಾಗೂ ಬನಶ್ರೀ ಪೆಟ್ರೋಲಿಯಂನ ಆಡಳಿತ ಪಾಲುದಾರರಾಗಿ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ.










