Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮೂಡ್ಲಕಟ್ಟೆ: ನವೋನ್ಮೇಶ 2025ರ ಸಮಾರೋಪ ಸಮಾರಂಭ
    ಊರ್ಮನೆ ಸಮಾಚಾರ

    ಮೂಡ್ಲಕಟ್ಟೆ: ನವೋನ್ಮೇಶ 2025ರ ಸಮಾರೋಪ ಸಮಾರಂಭ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಐಎಮ್‌ಜೆ ಇನ್ಸ್ಟಿಟ್ಯೂಶನ್ಸ್ ಮೂಡ್ಲಕಟ್ಟೆ ಇಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು‌ ಸ್ಪರ್ಧೆ ನವೋನ್ಮೇಶ 2025 ಇದರ ಸಮಾರೋಪ‌ ಸಮಾರಂಭ ತಾರಾ ಮೆರುಗಿನೊಂದಿಗೆ ನಡೆಯಿತು.

    Click Here

    Call us

    Click Here

    ಮುಖ್ಯ ಅತಿಥಿಯಾಗಿ ಆಗಮಿಸಿದ ಸು ಫ್ರಮ್ ಸೋ ಖ್ಯಾತಿಯ ನಟ ಶನೀಲ್‌ ಗೌತಮ್ ಅವರು ಮಾತನಾಡಿ, ತಮ್ಮ ವಿಧ್ಯಾರ್ಥಿ ಜೀವನವನ್ನು ಮೆಲುಕು‌ಹಾಕುತ್ತ, ಶಿಕ್ಷಕರ ಮಾರ್ಗದರ್ಶನವನ್ನು ನಿರ್ಲಕ್ಷಿಸದೆ ಎಲ್ಲ ಕ್ಷೇತ್ರದಲ್ಲು ತಮ್ಮನ್ನು ತಾವು ತೊಡಗಿಸಿಕೊಳ್ಳಿ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

    ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಈ ಟಿವಿ ಎದೆ ತುಂಬಿ ಹಾಡಿದೆನು ಹಾಗೂ ಸರಿಗಮಪ ಖ್ಯಾತಿಯ ದೀಕ್ಷಾ ರಾಮಕೃಷ್ಣ ಅವರು ಮಾತನಾಡಿ, ಪಾಠದ ಜೊತೆಗೆ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಆಶಿಸಿದರು.  ಸಭಾ ಕಾರ್ಯಕ್ರಮದ ಮೊದಲು ಇವರು ತಮ್ಮ ಸುಮಧುರ ಗಾಯನದ ಮೂಲಕ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

    ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಕುಂದಾಪುರ ಡಿವೈಎಸ್ಪಿ ಎಚ್ ಡಿ ಕುಲಕರ್ಣಿ ಅವರು ಮಾತನಾಡಿ, ಈ‌‌ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ, ಪದವಿ ಜೊತೆಗೆ ವಿದ್ಯಾರ್ಥಿಗಳು ಆಟೋಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸರಕಾರಿ ನೌಕರಿ ತಮ್ಮದಾಗಿಸಿಕೊಳ್ಳುವಲ್ಲಿ ಸಹಾಯವಾಗುತ್ತದೆ. ಆ ನಿಟ್ಟಿನಲ್ಲಿ ತಾವೆಲ್ಲರೂ ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ನವೋನ್ಮೇಶ2025 ನಾಲ್ಕು ವಿಭಾಗಗಳಲ್ಲಿ ಸ್ಪರ್ದೆಗಳು ನಡೆದಿದ್ದು ವಾಣಿಜ್ಯ, ವಿಜ್ಞಾನ, ಸಾಂಸ್ಕ್ರತಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಹಲವು ಸ್ಪರ್ದೆಗಳನ್ನು ನಡೆಸಿ ಪ್ರತಿ ವಿಭಾಗದಲ್ಲೂ  ಚಾಂಪಿಯನ್ ಪ್ರಶಸ್ತಿ ನೀಡಿದ್ದು ಕ್ರೀಡೆಯನ್ನು ಹೊರತುಪಡಿಸಿ ಉಳಿದ ಮೂರು ವಿಭಾಗದಲ್ಲಿ ಅತ್ಯುತ್ತಮ ಅಂಕಗಳಿಸಿದ ಕಾಲೇಜುಗಳಿಗೆ ಓವರಾಲ್ ವಿನ್ನರ್ ಹಾಗೂ ರನ್ನರ್ ಪ್ರಶಸ್ತಿ ನೀಡಲಾಯಿತು.

    Click here

    Click here

    Click here

    Click Here

    Call us

    Call us

    ಎಕ್ಸಲೆಂಟ್ ಪಿಯು ಕಾಲೇಜ್ ಸುಣ್ಣಾರಿ ನವೋನ್ಮೇಶ 2025ರ ಚಾಂಪಿಯನ್ ಆಗಿ ವಿನ್ನರ್ ಟ್ರೋಫಿ ಹಾಗೂ ರೂ 22,222 ನಗದು ಬಹುಮಾನ ತಮ್ಮದಾಗಿಸಿಕೊಂಡರೆ, ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜು, ಹೆಮ್ಮಾಡಿ ರನ್ನರ್ ಆಗಿದ್ದು ರೂ 15,555  ನಗದುಬಹುಮಾನ ಪಡೆದುಕೊಂಡರು. ಕಬಡ್ಡಿ ಪ್ರಥಮ ಸ್ಥಾನವನ್ನು ಟ್ರೋಫಿ ಹಾಗೂ ನಗದು 10,000 ದೊಂದಿಗೆ ಎನ್ ಎಮ್ ಸಿ ಸುಳ್ಯ ತನ್ನದಾಗಿಸಿಕೊಂಡಿತು, ಎನಪೋಯ ಪಿಯು ಕಾಲೇಜ್ ಮಂಗಳೂರು 7000 ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಹಾಗೂ ಶ್ರೀ ವೆಂಕಟರಮಣ ಪಿಯು ಕಾಲೇಜ್ ಕುಂದಾಪುರ 5000 ನಗದು ಜೊತೆಗೆ ತೃತೀಯ ಬಹುಮಾನ ಪಡೆದುಕೊಂಡರು.

    ಕಾರ್ಯಕ್ರಮದ ಪ್ರಮುಖ ಸಂಯೋಜಕರಾದ ಸ್ವರ್ಣ ರಾಣಿ, ಅರ್ಚನ ಉಪಧ್ಯಾಯ, ಸೂಕ್ಷ್ಮ ಅಡಿಗ ಹಾಗೂ ಪ್ರವೀಣ್ ಖಾರ್ವಿ ವಿಜೇತರ ಪಟ್ಟಿ ಘೋಷಿಸಿದರು.

    ಕಾರ್ಯಕ್ರಮದಲ್ಲಿ  ಸಂಸ್ಥೆಯ ಅಕಾಡಮಿಕ್ ಡೈರೆಕ್ಟರ್ ಡಾ. ಎಸ್ ಎನ್ ಭಟ್, ಎಮ್ ಐ ಟಿ ಕೆ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ, ಏಮ್ ಸಿ ಎನ್ ಪ್ರಾಂಶುಪಾಲೆ ಪ್ರೊಫೆಸರ್ ಜೆನಿಫ಼ರ್ ಫ಼್ರೀಡಾ ಮೆನೇಜಸ್, ಐ ಎಮ್ ಜೆ ಐ ಎಸ್ ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಪಟೇಲ್, ಅಲೈಡ್ ಹೆಲ್ಥ್ ಸೈನ್ಸ್ ಡೀನ್ ಡಾ. ಪದ್ಮಚರಣ್ ಹಾಗೂ  ಅಲೈಡ್ ಸೈನ್ಸ್ ಪ್ರಾಂಶುಪಾಲೆ ಹೇಮಲತ ಹಾಗೂ ಸಂಸ್ಥೆಯ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ಪರ್ದೆಗೆ ಆಗಮಿಸಿದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.

    ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಕಾರ್ತಿಕೇಯನ್ ನವೋನ್ಮೇಶ 2025ರ ವರದಿ ವಾಚಿಸಿದರು. ಎಮ್ ಐ ಟಿ ಕೆ ಕಾಲೇಜಿನ ಐ ಕ್ಯು ಎ ಸಿ ಹೆಡ್ ಡಾ. ನಿಖಿಲ ಪೈ ಸ್ವಾಗತಿಸಿ, ಪ್ರಾಧ್ಯಾಪಕರುಗಳಾದ ಶ್ರೀನಿಧಿ, ಸಿಂಚನ ಹಾಗೂ ಐಶ್ವರ್ಯ ಅತಿಥಿಗಳ ಪರಿಚಯ ನೀಡಿದರು. ಎಮ್ ಸಿ ಎನ್ ಕಾಲೇಜಿನ ಉಪಪ್ರಾಂಶುಪಾಲರಾದ ರೂಪಶ್ರೀ ವಂದಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    10 + 10 =

    Call us

    Click Here

    Call us

    Call us

    Call us
    Highest Viewed Recently
    • ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ʼಸಾಮಾಜಿಕ ನ್ಯಾಯ ಮತ್ತು ಭದ್ರತೆʼ ವಿಷಯದ ಕುರಿತು ಉಪನ್ಯಾಸ
    • ಜಲಮಾಲಿನ್ಯ ಉಂಟುಮಾಡುವ ವಸತಿ ಸಮುಚ್ಚಯಗಳ ಮಾಲೀಕರ ಮೇಲೆ ಕಾನೂನು ಕ್ರಮ: ಜಿಲ್ಲಾಧಿಕಾರಿ ಸೂಚನೆ
    • ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ
    • ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.