ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸ್ನೇಹಕೂಟದ ದಶಮಾನೋತ್ಸವದ ಊರ್ಮನಿ ಹಬ್ಬ ಸಂಭ್ರಮವನ್ನು ತರಲಿ ಜತೆಗೆ ಊರಿನ ಏಕತೆಯ ಸಂಕೇತವಾಗಿಲಿ ಎಂದು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು.
ಅವರು ಬುಧವಾರ ಕೋಟದ ಮಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ನೇಹಕೂಟ ಇದರ ದಶಮಾನೋತ್ಸವ ಸಂಭ್ರಮ ಊರ್ಮನಿ ಹಬ್ಬ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಸಾಂಸ್ಕೃತಿಕ ಪರಂಪರೆಯನ್ನು ಗಟ್ಟಿಗೊಳಿಸುವ ಸ್ನೇಹಕೂಟದಂತಹ ಸಂಘಟನೆಗಳು ಇನ್ನಷ್ಟು ಹುಟ್ಟಿಕೊಳ್ಳಬೇಕು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ, ಸಾಧಕರನ್ನು ಗೌರವಿಸುವ ಸ್ನೇಹಕೂಟದ ಕಾರ್ಯವೈಕರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ನೇಹಕೂಟ ಸಂಚಾಲಕಿ ಭಾರತಿ ವಿ. ಮಯ್ಯ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು.
ಪೋಸ್ಟರ್ ಬಿಡುಗಡೆಯಲ್ಲಿ ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ದಶಮಾನೋತ್ಸವ ಸಮಿತಿಯ ಪ್ರಮುಖರಾದ ವಿಷ್ಣುಮೂರ್ತಿ ಮಯ್ಯ, ಎಂ.ಎನ್ ಮಧ್ಯಸ್ಥ, ಸದಾಶಿವ ಹೊಳ್ಳ, ಸತೀಶ್ ಹೆಚ್. ಕುಂದರ್, ರಾಜೇಂದ್ರ ಉರಾಳ, ಶ್ರೀಕಾಂತ್ ಶೆಣೈ, ಅರುಣಾಚಲ ಮಯ್ಯ, ದಿನೇಶ್ ಆಚಾರ್ ಸ್ನೇಹಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತ ಎಂ. ಬಾಯರಿ ನಿರ್ವಹಿಸಿದರು.
















