ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಚೆಸ್ ಎಸೋಸಿಯೇಷನ್ ಅವರ ಜಂಟಿ ಆಶ್ರಯದಲ್ಲಿ ನಡೆದ ಅಂತರ್ ರಾಜ್ಯ ಎರಡನೇ ಬಿಎಸ್‌ಸಿ ಟ್ರೋಫಿಯ ಸಮಾರೋಪ ಸಮಾರಂಭವು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ಶೆಟ್ಟಿ, ಇವರುಗಳು ಉಪಸ್ಥಿತರಿದ್ದು, ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಟ್ರಾಫಿಗಳನ್ನು ನೀಡಿ ಶುಭಕೋರಿದರು ಹಾಗೂ ಬ್ರಹ್ಮಾವರ ಸ್ಫೋರ್ಟ್ಸ್ ಕ್ಲಬ್ಬಿನ ಸಮಾಜಮುಖಿ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನ ಸೂಚಿಸಿದರು.

ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಬಿಜು ಜಿ. ನಾಯರ್ ಅವರು ವಹಿಸಿ, ಸರ್ವರನ್ನು ಸ್ವಾಗತಿಸಿದರು.
ಗೌರವಾಧ್ಯಕ್ಷರಾದ ಎಂ. ಚಂದ್ರಶೇಖರ್ ಹೆಗ್ಡೆ ಮತ್ತು ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ,ಕಾರ್ಯಕಾರಿ ಸಮಿತಿಯ ಸದಸ್ಯರು , ಉಡುಪಿ ಜಿಲ್ಲಾ ಚೆಸ್ ಎಸೋಸಿಯೇಷನ್, ಅಧ್ಯಕ್ಷ ಉಮಾನಾಥ ಠಾಕೂರ್, ಮುಖ್ಯ ತೀರ್ಪುಗಾರರಾಗಿ ಸಾಕ್ಷಾತ್ ಯು.ಕೆ. ಅವರುಗಳು ಉಪಸ್ಥಿತರಿದ್ದರು.
ಚಾಂಪಿಯನ್ ಆಗಿ ಅನಿಶ್ ಎಸ್. ಸಿ. ಉಡುಪಿ, ಮೂಡಿ ಬಂದರು. ದ್ವಿತೀಯ ಅರವಿಂದ ಬಿ .ಆರ್. ಮತ್ತು ತೃತೀಯ ಬಹುಮಾನ ಪ್ರಜ್ವಲ್ ನಾಯಕ್, ಉಡುಪಿ ಅವರು ಪಡೆದುಕೊಂಡರು. ತಂಡ ಪ್ರಶಸ್ತಿಯನ್ನು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್,ಕಾಪು, ಪ್ರಥಮ ಮತ್ತು ಶ್ರೀ ಸಿದ್ಧಿ ವಿನಾಯಕ ಚೆಸ್ ಅಕಾಡೆಮಿ, ಬೈಂದೂರು ಅವರು ದ್ವಿತೀಯ ಬಹುಮಾನ ಪಡೆದುಕೊಂಡರು.
ಪಂದ್ಯಾಟದಲ್ಲಿ ಹಾಸನ, ಗೋವಾ, ಬೆಂಗಳೂರು ಮತ್ತು ಶಿವಮೊಗ್ಗದಿಂದ ಒಟ್ಟು 180 ಆಟಗಾರರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಖಜಾಂಜಿಗಳಾದ ವಿಕ್ರಂ ಪ್ರಭುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
















