ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶಿವನ ಮೂರ್ತಿ ನಿರ್ಮಾಣದ ಶಿಲಾನ್ಯಾಸ ಪೂಜನಾ ಕಾರ್ಯಕ್ರಮ ಗುರುವಾರ ಜರುಗಿತು.
ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ರವೀಶ್ ಭಟ್ ಧಾರ್ಮಿಕ ವಿಧಿವಿಧಾನ ನೇರವೇರಿಸಿದರು. ಸಂಕಲ್ಪವನ್ನು ರಾಮಪ್ಪ ಖಾರ್ವಿ ಮತ್ತು ರೇವತಿ ರಾಮಪ್ಪ ಖಾರ್ವಿ ನೇರವೇರಿಸಿದರು.
ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಗ್ರಾಪಂ. ಸದಸ್ಯ ಜಯೇಂದ್ರ ಆರ್ಕಾಟಿ, ನಾಗಪ್ಪಯ್ಯ ಪಟೇಲ್, ಶೃತಿ ಖಾರ್ವಿ, ಚೇತನ್ ಸಿಪಾ, ಕಾರ್ತಿಕ್, ಅನಿಲ್, ಹಿತೇಶ್, ರಿತೇಶ್, ಜಗದೀಶ್ ಪೂಜಾರಿ, ಅಕ್ಷಯ್, ನವೀನ್ ಉಪಸ್ಥಿತರಿದ್ದರು.










