ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಶಕ್ತರಿಗೆ ಹಾಗೂ ಅನಾರೋಗ್ಯ ಪೀಡಿತರ ನೆರವಿಗಾಗಿ ಯಕ್ಷಗಾನ ಆಯೋಜಿಸಿ ಅದರಲ್ಲಿನ ಮಿಗತೆಯ ಹಣವನ್ನು ನೆರವು ನೀಡುವ ಕಾರ್ಯ ಅತ್ಯಂತ ಪ್ರಶಂಸನಾರ್ಹ ಕಾರ್ಯವಾಗಿದೆ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೆ. ಕೃಷ್ಣ ಕಾಂಚನ್ ಹೇಳಿದರು.
ಅವರು ಶನಿವಾರ ಪಾರಂಪಳ್ಳಿ ಪಡುಕರೆ ಇಲ್ಲಿ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇವರ ಆರನೇ ವರ್ಷದ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯವರಿಂದ ಯಕ್ಷಗನಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ನೆರವು ಕಾರ್ಯವಲ್ಲದೆ ಕಲಾರಾಧನೆಗೆ ಪ್ರೋತ್ಸಾಹಿಸುವ ಈ ಸಂಘಟನೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರ ಇವರನ್ನು ಅಭಿನಂದನಾ ಕಾರ್ಯಕ್ರಮ ಅರ್ಥಪೂರ್ಣ ಎಂದರಲ್ಲದೆ ಸಂಘಟನೆ ಹುಟ್ಟಿಕೊಳ್ಳುವುದು ಸುಲಭ ಆದರೆ ಅದರ ನಿರಂತರತೆ ಬಹುಮುಖ್ಯವಾಗಿದೆ, ಆದರೆ ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ವಿನ್ ಲೈಟ್ ಮನೆ ಮಾತಾಗಿ ಬೆಳೆದಿದೆ ಎಂದರು.

ಸಭೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರ ಅವರನ್ನು ಅಭಿನಂದಿಸಿ ಗೌರವಿಸಿತು. ಇದೇ ವೇಳೆ ನಾಲ್ವರ ಅನಾರೋಗ್ಯ ಕುಟುಂಬಗಳಿಗೆ ರೂ ಒಂದು ಲಕ್ಷ ರೂ ಅಧಿಕ ನೆರವು ಹಸ್ತಾಂತರಿಸಿದರು.
ವೇದಿಕೆಯಲ್ಲಿ ಪ್ರಗತಿ ಪರ ಕೃಷಿಕ ಪಾರಂಪಳ್ಳಿ ರಘು ಮಧ್ಯಸ್ಥ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾ, ಪಾರಂಪಳ್ಳಿ ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ಉಪಾಧ್ಯಾ, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ಪೋರ್ಟ್ಸ್ ಕ್ಲಬ್‌ನ ದೇವೆಂದ್ರ ಶ್ರೀಯಾನ್ ಸ್ವಾಗತಿಸಿ, ನಿರೂಪಿದರು. ಕಾರ್ಯದರ್ಶಿ ಸುಧಾಕರ್ ಪೂಜಾರಿ, ಕೃಷ್ಣ ದೇವಾಡಿಗ ಮತ್ತಿತರರು ಸಹಕರಿಸಿದರು. ನಂತರ ಪೆರ್ಡೂರು ಮೇಳದವರಿಂದ ಚದುರಂಗ ಯಕ್ಷಗಾನ ಪ್ರದರ್ಶನಗೊಂಡಿತು.
















