ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಲಾಯ್ಸ್ ಅಲ್ಫೇನ್ ಗಂಗೊಳ್ಳಿ, ನೂರ್ ಕ್ರಿಕೆಟರ್ಸ್ ಗಂಗೊಳ್ಳಿ ಹಾಗೂ ನಮ್ಮ ನಾಡ ಒಕ್ಕೂಟ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಮುಬಾರಕ್ ಮೈದಾನದಲ್ಲಿ ನಡೆದ ಕಲಾಯ್ಸ್ ಅಲ್ಫೇನ್ ಪ್ರೀಮಿಯರ್ ಲೀಗ್ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ’ಎನ್‌ಎನ್‌ಓ ಕಪ್ 2025’ದಲ್ಲಿ ಗಂಗೊಳ್ಳಿಯ ಸಹರಾ ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನಿಯಾಗಿ 1,00,111 ರೂ. ನಗದು ಹಾಗೂ ’ಎನ್‌ಎನ್‌ಓ ಕಪ್ 2025ನ್ನು ತನ್ನದಾಗಿಸಿಕೊಂಡಿದೆ.
ಮುಬಾರಕ್ ಗಂಗೊಳ್ಳಿ ತಂಡ ರನ್ನರ್ ಅಪ್ ಪ್ರಶಸ್ತಿ ಹಾಗೂ 50,555 ನಗದನ್ನು ಪಡೆದುಕೊಂಡಿತು. ಮುಬಾರಕ್ ಗಂಗೊಳ್ಳಿ ತಂಡದ ಮೊಹಮ್ಮದ್ ಅಜೀಂ ಸರಣಿ ಶ್ರೇಷ್ಟ ಆಟಗಾರ ಪ್ರಶಸ್ತಿ ಹಾಗೂ ದ್ವಿಚಕ್ರ ವಾಹನ ಪಡೆದುಕೊಂಡರು. ಫೈನಲ್ ಪಂದ್ಯದ ಪಂದ್ಯ ಶ್ರೇಷ್ಟ ಪ್ರಸ್ತಿಯನ್ನು ಸಹಾರ ಗಂಗೊಳ್ಳಿ ತಂಡದ ನವೀನ್ ಕುಂದಾಪುರ ಪಡೆದುಕೊಂಡರು. ಉತ್ತಮ ದಾಂಡಿಗ ಪ್ರಶಸ್ತಿಯನ್ನು ಸಹರಾ ಗಂಗೊಳ್ಳಿ ತಂಡದ ನವೀನ್ ಕುಂದಾಪುರ ಮೂಡಿಬಂದರು. ಉತ್ತಮ ಬೌಲರ್ ಆಗಿ ಡ್ರೈವರ್ ಫ್ರೆಂಡ್ ತಂಡದ ಪ್ರಮೋದ್ ಆಯ್ಕೆಯಾದರು. ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಬಿಲಾಲ್ ಗೋಳಿಹೊಳೆ ತಂಡದ ಇಮ್ರಾನ್ ಆಯ್ಕೆಯಾದರು.

ಸಮಾರೋಪ ಸಮಾರಂಭದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮೊಮಿನ್ ಸಮೀರ್, ಮೊಹಮ್ಮದ್ ಹುಸೇನ್, ಸ್ಥಳೀಯರಾದ ಶಾಕಿರ್ ಮಾಲ್ಗ, ಹಾಜಿ ಸಾಹೇಬ್, ಸಮಿಉಲ್ಲಾ ಎಂ. ಎಚ್. ವಿಜೇತರಿಗೆ ಬಹುಮಾನ ವಿತರಿಸಿದರು.
ಕರ್ನಾಟಕ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಟ್ರೋಫಿ ಅನಾವರಣಗೊಳಿಸಿದರು. ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ನಕ್ವ ಯಾಹ್ಯ ಮಲ್ಪೆ, ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಸಾಹೇಬ್, ಟ್ರಸ್ಟಿ ಫಜ್ಲು ರಹಮಾನ್, ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಸೆಂಟ್ರಲ್ ಕಮಿಟಿ ಪ್ರದಾನ ಕಾರ್ಯದರ್ಶಿ ಮೌಲಾನಾ ಜಮೀರ್ ಅಹಮದ್ ರಶಾಧಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಆದಿಲ್ ಅಧಿ ಉಡುಪಿ, ಜಿಲ್ಲಾ ಸಮಿತಿ ಸದಸ್ಯ ಹರೂನ್ ರಶೀದ್ ಸಾಸ್ತಾನ, ಶಕೀಲ್ ಹೊನ್ನಾಳ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಬ್ರೆಜ್, ಗಂಗೊಳ್ಳಿ ಜಮಾತುಲ್ ಮುಸ್ಲೀಮೀನ್ ಅಧ್ಯಕ್ಷ ಮೊಹಮ್ಮದ್ ಹನೀಫ್, ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಮೊಹಮ್ಮದ್ ಅಯೂಬ್, ಚಕ್ರವರ್ತಿ ಕ್ರಿಕೆಟರರ್ಸ್ ಮನೋಜ್ ನಾಯರ್, ಟಾರ್ಪೆಟೋಸ್ ಕ್ರಿಕೆಟರ್ಸ್‌ನ ಗೌತಮ ಶೆಟ್ಟಿ ಉಪಸ್ಥತರಿದ್ದರು.
ಕಲಾಯ್ಸ್ ಅಲ್ಫೇನ್ ಗಂಗೊಳ್ಳಿ ಇದರ ಮುಖ್ಯಸ್ಥ ಜಹೀರ್ ನಾಖುದಾ ಸ್ವಾಗತಿಸಿದರು. ಬಿಲಾಲ್ ಮಣಿಪುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
















