ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯೋಗಾಸನ ಭಾರತ್ ಸಂಸ್ಥೆಯು ಮಹಾರಾಷ್ಟ್ರದ ಸಂಗಮ್ ನರ್ನಲ್ಲಿ ಆಯೋಜಿಸಿದ್ದ 6ನೇ ಜ್ಯೂನಿಯರ್ ಮತ್ತು ಸೀನಿಯರ್ ರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿ ಗುರುದಾಸ್ ಅವರು ಪ್ರಥಮ ಸ್ಥಾನದೊಂದಿಗೆ ಗೋಲ್ಡ್ ಮೆಡಲ್ ಪಡೆದು ಅಂತರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲಿರುವ ಯೋಗಪಟುಗಳ ತಂಡದಲ್ಲಿ, ಗುರುದಾಸ್ ಅವರು ಕರ್ನಾಟಕದಿಂದ ಆಯ್ಕೆಯಾದ ಏಕೈಕ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಉತ್ತಮ ಯೋಗಪಟುವಾಗಿರುವ ಗುರುದಾಸ್ ಅವರು ಈ ಹಿಂದೆಯೂ ಅನೇಕ ಯೋಗಾಸನ ಕ್ರೀಡಾಕೂಟದಲ್ಲಿ ಪಾಲ್ಗೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದುಕೊಂಡಿದ್ದರು. ಇದೀಗ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು, ಅವರ ಪ್ರತಿಭಾ ಸಂಪನ್ನತೆಗೆ ಗರಿ ಮೂಡಿದಂತಾಗಿದೆ.
ಗುರುದಾಸ್ ಅವರು ತಗ್ಗರ್ಸೆ ಗ್ರಾಮದ ಮಂಜುನಾಥ ಜಿ ಹಾಗೂ ಕಾವೇರಿ ದಂಪತಿಗಳ ಪುತ್ರರಾಗಿದ್ದು, ಪತ್ನಿ ರೂಪಾ ಅವರೊಂದಿಗೆ ಕುಂದಾಪುರದಲ್ಲಿ ವಾಸವಾಗಿದ್ದಾರೆ.










