ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮದ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಜನರ ಒಗ್ಗೂಡುವಿಕೆ ಅಗತ್ಯ, ಸರ್ಕಾರದ ನಾನಾ ಇಲಾಖೆಗಳ ಯೋಜನೆಗಳನ್ನು ಜನರ ಬಳಿಗೆ ತಲುಪಿಸುವಲ್ಲಿ ಗ್ರಾಮೋತ್ಸವ ಸಹಕಾರಿಯಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಅವರು ಇಲ್ಲಿನ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಆರೋಗ್ಯ, ಕೃಷಿ, ಪಶು ಸಂಗೋಪನಾ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ಮೆಸ್ಕಾಂ ಹಾಗೂ ಬ್ಯಾಂಕಿಂಗ್ ಇಲಾಖೆಯ ಸಹಭಾಗಿತ್ವದಲ್ಲಿ ನಡೆದ ಬಿಜೂರು ಗ್ರಾಮೋತ್ಸವ ಉದ್ಘಾಟಿಸಿ ಮಾತನಾಡಿದರು. ಸಂಜೀವಿನಿ ಸಂಘದ ಮೂಲಕ ಮಹಿಳಾ ಸಬಲೀಕರಣ ಸಾಧಿಸಲು ಇದೊಂದು ಉತ್ತಮ ಅವಕಾಶ. ಮಹಿಳೆಯರು ಅಗತ್ಯವಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಂಜೀವಿನಿ ಕೇವಲ ಹಣಕಾಸಿನ ವ್ಯವಹಾರ ಎಂದು ಕೆಲವರು ತಿಳಿದುಕೊಂಡಿರಬಹುದು ಆದರೆ ಇದೊಂದು ಇತರೇ ಆದಾಯದ ಸ್ವರೂಪವಾಗಿದ್ದು, ಗ್ರಾಮೀಣ ಜೀವನೋಪಾಯಕ್ಕೆ ಆಧಾರವಾಗಿದೆ ಎಂದರು.

ಗ್ರಾಪಂ ಉಪಾಧ್ಯಕ ರಂಜಿತ್ ಪೂಜಾರಿ, ಹಿರಿಯರಾದ ರಘುರಾಮ ಶೆಟ್ಟಿ ಬಿಜೂರು, ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ, ಬೈಂದೂರು ಉತ್ಸವ ಸಮಿತಿ ಅಧ್ಯಕ್ಷ ಶ್ರೀಗಣೇಶ್ ಗಾಣಿಗ ಉಪ್ಪುಂದ, ಉಪಾಧ್ಯಕ್ಷೆ ಅನಿತಾ ಆರ್. ಕೆ., ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಸುಶೀಲಾ ದೇವಾಡಿಗ, ಗೋವಿಂದ ಪೂಜಾರಿ, ಕರ್ಣ ಪೂಜಾರಿ, ಜಯರಾಮ ಶೆಟ್ಟಿ, ರಮೇಶ ವಿ. ದೇವಾಡಿಗ, ಗಿರೀಶ್ ಶ್ಯಾನುಭಾಗ್, ವಿರೇಂದ್ರ ಶೆಟ್ಟಿ, ಅಲಕ ಸುರೇಶ್, ಶ್ರೀಧರ ಬಿಜೂರು, ಸುಂದರ ಬವಳಾಡಿ, ಗಂಗಾಧರ ತಿಪ್ಪನಡಿ, ಗಿರೀಶ್ ಸಾಲಿಮಕ್ಕಿ, ರಾಘವೇಂದ್ರ ಗಾಣಿಗ, ಅಶೋಕ ಪೂಜಾರಿ, ಮುಖ್ಯ ಶಿಕ್ಷಕ ಮಂಜುನಾಥ ಎಸ್. ಬಿಜೂರು ಉಪಸ್ಥಿತರಿದ್ದರು.
ಗ್ರಾಮೋತ್ಸವ ಉಸ್ತುವಾರಿ ರಾಜೇಂದ್ರ ಪ್ರಾಸ್ತಾವಿಸಿದರು. ಪಿಡಿಓ ಗೀತಾ ಸ್ವಾಗತಿಸಿ, ದೀಪಕ್ ನಿರೂಪಿಸಿ, ಗ್ರಾಪಂ ಕಾರ್ಯದರ್ಶಿ ನಾಗರಾಜ ದೇವಾಡಿಗ ವಂದಿಸಿದರು.










