ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇದೇ ಬರುವ ಮಾಚ್೯ 1ರಂದು ಕೋಟ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ: ಪ್ರವಿತ್ರ ನಾಗಮಂಡಲೋತ್ಸವದ ಕಛೇರಿಯನ್ನು ದೇಗುಲದ ಸಭಾಂಗಣದಲ್ಲಿ ಮೂಡುಗಿಳಿಯಾರಿನ ಹೊನ್ನಾರಿ ಬೊಬ್ಬರ್ಯ ದೈವಸ್ಥಾನದ ಪ್ರಧಾನ ಅರ್ಚಕ ಮಹಾಬಲ ಹೇರ್ಳೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್, ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಶಿವ ಪೂಜಾರಿ, ಸುಧಾ ಎ. ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಭಾಷ್ ಶೆಟ್ಟಿ ಗಿಳಿಯಾರು, ಜ್ಯೋತಿ ಡಿ. ಕಾಂಚನ್, ಸುಬ್ರಾಯ ಜೋಗಿ, ಚಂದ್ರ ಆಚಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.










