ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ಬೈಂದೂರು ತಾಲೂಕು ತಹಶೀಲ್ದಾರರಾದ ರಾಮಚಂದ್ರಪ್ಪನವರು ಭೇಟಿ ನೀಡಿ, ಸಂಘದ ಕಾರ್ಯವೈಖರಿಗಳ ಬಗ್ಗೆ ಶ್ಲಾಘಿಸಿದರು.

ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರ ಸಂಘಗಳ ವಲಯ ಮೇಲ್ವಿಚಾರಕರಾದ ಶಿವರಾಮ ಪೂಜಾರಿ, ಸಂಘದ ಸಿಇಒ ವಿಷ್ಙು ಪೈ, ವ್ಯವಸ್ಥಾಪಕರಾದ ಎಚ್. ರಾಮ, ಭಾಸ್ಕರ ದೇವಾಡಿಗ ಕೆ., ಪ್ರಭಾರ ವ್ಯವಸ್ಥಾಪಕರಾದ ರಿತೇಶ್ ಕಿಣಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










