ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಸಾಸ್ತಾನದ ಸಮೀಪದ ಗುಂಡ್ಮಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಕಳೆದೆರಡು ದಿನಗಳಿಂದ ಗುಂಡ್ಮಿ ಮೊಗ್ಗೋಡು ಗಿರಿಜಾ ಮರಕಾಲ್ತಿ ಮನೆ ವಠಾರದಲ್ಲಿ, ಗುಂಡ್ಮಿ ಪಟ್ಟಾಭಿ ಮಿಲ್ ಸಮೀಪ ರಿತಾಜ್ ಎಂಬಾಕೆ ನೋಡಿದ್ದು ಸ್ಥಳೀಯರಾದ ರಾಜು ಮರಕಾಲ ಗೋವಿಂದ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದು ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್ ಶೆಟ್ಟಿ, ವಿಠ್ಠಲ್ ಪೂಜಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಗುರುವಾರ ಮತ್ತೆ ಪುನಃ ಗುಂಡ್ಮಿ ರಥಬೀದಿ ಸುಬ್ಬ ರಾವ್ ಮನೆ ಹತ್ತಿರ ಪ್ರತ್ಯಕ್ಷವಾಗಿದ್ದು ಶುಕ್ರವಾರ ಅರಣ್ಯ ಇಲಾಖೆಗೆ ಪಟ್ಟಣಪಂಚಾಯತ್ ಮಾಜಿ ಸದಸ್ಯ ರವೀಂದ್ರ ಕಾಮತ್ ಇಲಾಖೆಗೆ ಮಾಹಿತಿ ನೀಡಿ ಇಲಾಖೆ ಶುಕ್ರವಾರ ಅಪರಾಹ್ನ ಬೋನ್ ಇರಿಸಿದೆ. ಒಟ್ಟಿನಲ್ಲಿ ತೆಕ್ಕಟ್ಟೆ, ಬೇಳೂರು ವ್ಯಾಪ್ತಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ಪಟ್ಟಣವ್ಯಾಪ್ತಿಯ ಕಡೆ ಮುಖ ಮಾಡಿದೆ.










