ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಂಗೀತ ಕ್ಷೇತ್ರದಲ್ಲಿ ಗಾನ ನಿನಾದ ಆರ್ಕೇಸ್ಟ್ರಾ ತಂಡ ತನ್ನದೆ ಆದ ವಿಶಿಷ್ಟ ಕಾರ್ಯಕ್ರಮಗಳಿಂದ ಗುರುತಿಸಿಕೊಂಡಿದೆ. ಅಲ್ಲದೆ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವನ್ನು ನೀಡಿದೆ ಎಂದು ಉಡುಪಿಯ ಭವಾನಿ ಬಿಲ್ಡರ್ ಮಾಲಿಕ ನಾರಾಯಣ ಆಚಾರ್ ಹೇಳಿದರು.
ಅವರು ಪಾಂಡೇಶ್ವರದ ಶಾಲಾ ವಠಾರದಲ್ಲಿ ಗಾನ ನಿನಾದ ಆರ್ಕೇಸ್ಟ್ರಾ ಪಾಂಡೇಶ್ವರ ಇದರ ದಶಮಾನೋತ್ಸವ ಸಂಭ್ರಮದ ಹಿನ್ನಲ್ಲೆಯಲ್ಲಿ ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೇಸ್ ಸಹಯೋಗದೊಂದಿಗೆ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧಾ ಕಾರ್ಯಕ್ರಮದಲ್ಲಿ ಟ್ರೋಫಿ ಅನಾವರಣಗೈದು ಮಾತನಾಡಿದರು. ಕಲಾವಿದರಿಗೆ ಅಥವಾ ಕಲಾ ತಂಡಗಳಿಗೆ ಪ್ರೋತ್ಸಾಹ ನೀಡುವ ಹೊಣೆಗಾರಿಕೆ ಪ್ರತಿಯೊರ್ವರಲ್ಲೂ ಇರಬೇಕು. ಈ ದಿಸೆಯಲ್ಲಿ ನಮ್ಮ ಸಂಸ್ಥೆ ಶ್ರೀಶ ಆಚಾರ್ ತಂಡದ ಜತೆ ಸದಾ ಬೆಂಗಾವಲಾಗಿ ಪ್ರೋತ್ಸಾಹ ನೀಡಲಿದೆ. ಇಂಥಹ ಕಾರ್ಯಕ್ರಮಗಳಿಂದ ಒಂದಿಷ್ಟು ಪ್ರತಿಭೆಗಳು ಅನಾವರಣಗೈಯಲು ವೇದಿಕೆ ಕಲ್ಪಿಸಲಿದೆ ಎಂದರು.

ಕಾರ್ಯಕ್ರಮವನ್ನು ಉದ್ಯಮಿ ಎಂ.ಸಿ. ಚಂದ್ರಶೇಖರ ಪೂಜಾರಿ ಪಾಂಡೇಶ್ವರ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಹಿಸಿದಗಾಯಕರಿಗೆ ಗೌರವಾರ್ಪಣೆ ಜರಗಿತು. ಅಲ್ಲದೆ ರಂಗನಟಿ ದಿಕ್ಷಾ ಬ್ರಹ್ಮಾವರ ಅವರನ್ನು ಸನ್ಮಾನಿಸಲಾಯಿತು.
ಗಾಯನ ಸ್ಪರ್ಧೆಯಲ್ಲಿ ಅಂತಿಮಾ ಸುತ್ತಿಗೆ ಪ್ರವೇಶ ಪಡೆದ ಹತ್ತು ಜನ ಗಾಯಕರಿಗೆ ಗೋಲ್ಡನ್ ಪ್ರತಿಯನ್ನು ಅತಿಥಿಗಳ ಮೂಲಕ ಹಸ್ತಾಂತರಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಸಮಾಜ ಸೇವಕರಾದ ಜೋಸೆಫ್ ಮಿನೇಜಸ್, ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೇಸ್ ಪಾಲುದಾರ ರಾಘವೇಂದ್ರ ಪೂಜಾರಿ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಗುತ್ತಿಗೆದಾರ ಉದಯ್ ಆಚಾರ್, ಶ್ರೀ ಕ್ಷೇತ್ರ ಕಳಿಬೈಲು ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ, ಪಾಂಡೇಶ್ವರ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ಪೂಜಾರಿ, ಗಾನ ನಿನಾದ ತಂಡದ ಮುಖ್ಯಸ್ಥ ಶ್ರೀಶ ಆಚಾರ್ ಉಪಸ್ಥಿತರಿದ್ದರು.
ರಾಘವೇಂದ್ರ ರಾಜ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ನಂತರ ಗಾನ ನಿನಾದ ತಂಡದಿಂದ ಗಾನ ಗೌರವಾರ್ಪಣೆ, ಸ್ಟೆಪ್ ಅಂಡ್ ಸ್ಟೈಲ್ ನೃತ್ಯ ತಂಡದಿಂದ ಡಾನ್ಸ್, ಕರೋಕೆ ಗಾಯನ ಅಂತಿಮ ಸುತ್ತಿನ ಸ್ಪರ್ಧಾ ಕಾರ್ಯಕ್ರಮ ಜರಗಿತು.
















