ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬೆಂಗಳೂರು ಇವರು ಅಯೋಜಿಸಿದ ಅಖಿಲ ಭಾರತ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಇಶಾನಿ ಪಿ. (2ನೇ ಸ್ಥಾನ), ಶ್ರೀಶುಭಂ ಶ್ರೀಕಾಂತ್ ಶೆಟ್ಟಿ (9ನೇ ಸ್ಥಾನ) ಹಾಗೂ ಶ್ರಾವಣಿ ಮಂಜುನಾಥ್ ನಾಯಕ್ (13ನೇ ಸ್ಥಾನ)ವನ್ನು ಪಡೆದಿರುತ್ತಾರೆ.
ಅವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.










