ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕೊಡ್ಲಾಡಿ ಗ್ರಾಮದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ 28ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ವರ್ಧಂತ್ಯುತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಬಳಿಕ ನವಕುಂಭಸ್ಥಾಪನಾದಿ ಹೋಮ, ಹಾಗುಳಿ ಮತ್ತು ನಾಗ ದೇವರಿಗೆ ಕುಂಭಾಭಿಷೇಕ, ಮಹಾಪೂಜೆ, ನಾಗ ದೇವರ ಹಾಗೂ ಹಾಗುಳಿ ದೈವದ ಸಂದರ್ಶನ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಸಂಜೆ ಢಕ್ಕೆ ಬಲಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಪುರೋಹಿತರು, ದೈವಸ್ಥಾನದ ಆಡಳಿತ ಮೊಕ್ತೇಸರ ಭಾಂಡ್ಯ ಸುಬ್ಬಣ್ಣ ಶೆಟ್ಟಿ, ಭಾಂಡ್ಯ ಸುಭಾಶ್ ಶೆಟ್ಟಿ, ಭಾಂಡ್ಯ ಸುಧಾಕರ ಶೆಟ್ಟಿ, ಭಾಂಡ್ಯ ಗೋವಿಂದ್ರಾಯ ಪೈ, ಭಾಂಡ್ಯ ಕೃಷ್ಟ್ರಾಯ ಪೈ, ಆಡಳಿತ ಮಂಡಳಿ ಸದಸ್ಯರು, ಊರ ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.










