ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳಕ್ಕೆ ಗಣಪತಿ ಬೆತ್ತದ ಪೆಟ್ಟಿಗೆಯನ್ನು ಅರುಂಧತಿ ಎಚ್. ಮಯ್ಯ ಮತ್ತು ಕುಟುಂಬದವರು ಹುಬ್ಬಳ್ಳಿ ಹಾಗೂ ಕೆ. ಶ್ರೀನಿವಾಸರಾವ್ ಮತ್ತು ಸಹೋದರು ಕೋಟತಟ್ಟು ಪಡುಕರೆ ಇವರ ಪರವಾಗಿ ಹಿರಿಯ ಕೃಷಿಕ ಕೆ. ಶಿವಮೂರ್ತಿ ಕೋಟತಟ್ಟು ಪಡುಕೆರೆ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರಿಗೆ ಹಸ್ತಾಂತರಿಸಿದರು.
ಗಣಪತಿ ದೇವರು ಇಡುವ ಬೆತ್ತದ ಪೆಟ್ಟಿಗೆ ಸುಮಾರು 15,000 ರೂ ಮೌಲ್ಯ ಹೊಂದಿದ್ದು ಇತ್ತೀಚಿಗೆ ಶ್ರೀದೇಗುಲದಲ್ಲಿ ಇದನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇಗುಲದ ಸಮಿತಿಯ ಸದಸ್ಯರಾದ ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಸುರೇಶ್ ಬಂಗೇರ, ಯಕ್ಷಗಾನ ಸೇವಾಕರ್ತರಾದ ಸುಧೀರ್ ಕೊಯ್ಕೂರು ದಂಪತಿಗಳು ಇದ್ದರು.










