ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ 1976ರ ಬ್ಯಾಚ್ ವಿದ್ಯಾರ್ಥಿಗಳ ಪುನರ್ಮಿಲನ “ಬಂಗಾರದ ಭೇಟಿ” ಕಾರ್ಯಕ್ರಮ ನಡೆಯಿತು.
1976ನೇ ಸಾಲಿನಲ್ಲಿ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದು ಮುಗಿಸಿದ ಈ ವಿದ್ಯಾರ್ಥಿಗಳು 50ನೇ ವರ್ಷದ ನೆನಪಿಗಾಗಿ ನಡೆದ ಈ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕರುಗಳಾದ ಎ.ಪಿ.ಮಿತ್ತಂತ್ತಾಯ, ಬಾಲಕೃಷ್ಣ ಭಟ್, ಮನೋಹರ ಪೈ ಮತ್ತು ಶರ್ಮಾ ಅವರು ಉದ್ಘಾಟಿಸಿದರು.

ನಿವೃತ್ತ ಪ್ರಾಧ್ಯಾಪಕರಾದ ಎ.ಪಿ.ಮಿತ್ತಂತ್ತಾಯ, ಬಾಲಕೃಷ್ಣ ಭಟ್ ದಿನ ವಿದ್ಯಾರ್ಥಿಗಳು ಮತ್ತು ಗುರುಗಳ ಬಾಂಧವ್ಯವನ್ನು ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ ಪ್ರಭು ವಹಿಸಿದ್ದರು.
ಕರ್ನಾಟಕ ಬ್ಯಾಂಕ್ ನಿವೃತ್ತ ಮುಖ್ಯ ವ್ಯವಸ್ಥಾಪಕ ಗಿರಿಧರ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. 1976ರ ಬ್ಯಾಚ್ ವಿದ್ಯಾರ್ಥಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿವೃತ್ತ ಛೇರ್ಮನ್ ಕೆ.ಆರ್. ಕಾಮತ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ನಂತರ 53 ವಿದ್ಯಾರ್ಥಿಗಳು ಸಮ್ಮಿಲನದಲ್ಲಿ ಮನೋರಂಜನೆ ಹಳೆಯ ನೆನಪುಗಳನ್ನು ಮೆಲುಕುವಿಕೆ ಪರಸ್ಪರರ ಪರಿಚಯ ನಡೆಯಿತು.
















