ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರ ಇದರ 41ನೇ ವರ್ಷದ ವಾರ್ಷಿಕ ಸಂಭ್ರಮಕ್ಕಾಗಿ ಶಿಶು ಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ ಜನಮನಸೂರೆಗೊಂಡಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ, ಪ್ರಸ್ತುತ ಭಾರತೀಯ ಹಿಂದೂ ಸನಾತನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅವಶ್ಯಕತೆಯ ಬಗ್ಗೆ ತಿಳಿಸಿದರು.


ಕೊಲ್ಲೂರು ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಜಯಾನಂದ ಹೋಬಳಿದಾರ್, ಚಿಣ್ಣರೆ ಸಾಂಸ್ಕೃತಿಕ ವೈವಿಧ್ಯವನ್ನು ಕಳೆದ 41 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಶಿಶುಮಂದಿರದಲ್ಲಿ ಕಲಿತಂತಹ ದಿ.ಸ್ಪಂದನ ಜಯಾನಂದ ಹೋಬಳಿದಾರ್ ಸವಿನೆನಪಿಗಾಗಿ ಒಂದು ಲಕ್ಷ ರೂ. ಕೊಡುಗೆಯನ್ನು ತನ್ನ ಪುತ್ರಿಯ ಸವಿನೆನಪಿಗಾಗಿ ಘೋಷಣೆ ಮಾಡಿದರು. ಜಯಾನಂದ ಹೋಬಳಿದಾರ್ ಅವರನ್ನು ಸಾಮಾಜಿಕ ಸೇವೆಗಾಗಿ ಗೌರವಸಲಾ ಯಿತು.
ಬೈಂದೂರು ಸೇನೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ದಿಕ್ಕೂಚಿ ಭಾಷಣಕಾರರಾಗಿ ಆಗಮಿಸಿದ ಸೇವಾ ಸಂಗಮ ಟ್ರಸ್ಟ್ ಕುಂದಾಪುರ ಇದರ ವಿಶ್ವಸ್ಥರಾದ ಚಂದ್ರಿಕಾ ಧನ್ಯ ಮಾತನಾಡಿದರು. ಸೇವಾ ಸಂಗಮದ ಕಾರ್ಯದರ್ಶಿ ರಾಜೇಶ್ ಐತಾಳ್, ಉಪಾಧ್ಯಕ್ಷ ರವೀಂದ್ರ ಶಾನುಭಾಗ್, ವ್ಯವಸ್ಥಾಪಕ ದಿನೇಶ್ ಪಡುವರಿ ಉಪಸ್ಥಿತರಿದ್ದರು.
ಶಿಕ್ಷಕಿ ಕಮಲಾ ಸ್ವಾಗತಿಸಿದರು. ಮಾತಾಜಿ ಸುಜಾತಾ ವರದಿ ವಾಚಿಸಿ, ಉಪಾಧ್ಯಕ್ಷ ಸುಧಾಕರ ಪಿ. ಬೈಂದೂರು ನಿರ್ವಹಿಸಿದರು. ಆಶಾ ದಿನೇಶ್ ವಂದಿಸಿದರು. ನಂತರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕೋತ್ಸವ ನಡೆಯಿತು.
















