ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಿ. ಮಂಗಳೂರು, ಬೈಂದೂರು ಕ್ಷೇತ್ರ ಸಮಿತಿ, ನಗರ ಸಮಿತಿ ಬೈಂದೂರು, ವಲಯ ಸಮಿತಿ ಉಪ್ಪುಂದ, ನಾವುಂದ, ವಂಡೈ ಕೊಲ್ಲೂರು ಮತ್ತು ಗುಜ್ಜಾಡಿ ಇವರ ವತಿಯಿಂದ ಟೈಲರ್ಸ್ ಡೇ ಕಾರ್ಯಕ್ರಮವು ಇತ್ತೀಚಿಗೆ ಈಶ್ವರ ಮಾರಿಕಾಂಬ ದೇವಸ್ಥಾನ ಕಳವಾಡಿಯಲ್ಲಿ ನಡೆಯಿತು.
ಇದರ ಅಂಗವಾಗಿ ಬೆಳಿಗ್ಗೆ ಗಂಟೆ 8:30ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಿ ಬೈಂದೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ರಾಜು ಪೂಜಾರಿ ಕೊಲ್ಲೂರು, ಕೋಶಾಧಿಕಾರಿ ರಾಜು ಮೊಗವೀರ ಹಾಗೂ ನಗರ ಸಮಿತಿಯ ಅಧ್ಯಕ್ಷೆ ಶ್ರೀಮತಿ ಗೌಡ, ಕೊಲ್ಲೂರು ವಲಯ ಅಧ್ಯಕ್ಷರಾದ ಮಹಾಲಕ್ಷ್ಮಿ ಭಟ್, ವಂಡ್ಸೆ ವಲಯದ ಅಧ್ಯಕ್ಷರಾದ ಸವಿತಾ ಉಪ್ಪುಂದ, ಸುಶೀಲ ದೇವಾಡಿಗ ನಾವುಂದ, ಸವಿತಾ ಖಾರ್ವಿ ಗುಜ್ಜಾಡಿ, ಶಾಂತಿ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕ ಕಾರ್ಡ್ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.










