ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಸಾರಥ್ಯದಲ್ಲಿ ನಡೆಯುತ್ತಿರುವ ರೋಟರಿ ನರ್ಸರಿ ಶಾಲೆ ಇದರ ವಾರ್ಷಿಕೋತ್ಸವದ ಸಂಭ್ರಮವು ಹಾಗೂ ಚಿನ್ನರ ಚಿಲಿಪಿಲಿ ಬಹಳ ಅದ್ದೂರಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೀತಾಂಜಲಿ ಆರ್. ನಾಯಕ್ ಗಿಡಕ್ಕೆ ನೀರು ಹಾಕುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರೋಟರಿ ನರ್ಸರಿ ಶಾಲೆ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತಮ ಅಡಿಪಾಯ ಹಾಕಿಕೊಡುತ್ತಿದೆ. ಮಕ್ಕಳಿಗೆ ಮತ್ತು ಪೋಷಕರಿಗೆ ಮಕ್ಕಳ ಲಾಲನೆ ಪಾಲನೆ ಬಗ್ಗೆ ಬಹಳ ಸುಂದರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಶೆಟ್ಟಿ ವಹಿಸಿದ್ದರು.
ರೋಟರಿ ನರ್ಸರಿ ಸ್ಕೂಲ್ ಚೇರ್ಮನ್ ವೆಂಕಟೇಶ್ ನಾವುಂದ ರೋಟರಿ ನರ್ಸರಿ ಶಾಲೆ ನಡೆದು ಬಂದ ದಾರಿ ಮತ್ತು ಅಭಿವೃದ್ಧಿ ಬಗ್ಗೆ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ ಶೆಟ್ಟಿ ರೋಟರಿ ನರ್ಸರಿ ಶಾಲೆಯಲ್ಲಿ ಶಿಕ್ಷಕರ ಪಾತ್ರ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ಮಾತನಾಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಸರ್ವೋದಯ ಪೂಜಾರಿ ಅವರು ಮಕ್ಕಳಿಗೆ ಶುಭಾಶಯವನ್ನು ಹೇಳಿದರು.
ಈ ಸಂದರ್ಭದಲ್ಲಿ ಪಿ.ಡಿ.ಜಿ.ರೊ.ಎ. ಎಸ್. ಎನ್. ಹೆಬ್ಬಾರ್, ಪಿ.ಎ.ಜಿ.ರೊ. ಕೊಡ್ಲಾಡಿ ಸುಭಾಷ್ ಚಂದ್ರ ಶೆಟ್ಟಿ, ಪಿ.ಎ.ಜಿ.ರೊ. ರವಿರಾಜ್ ಶೆಟ್ಟಿ, ರಾಘವೇಂದ್ರ ಗೋಪಾಡಿ, ರೋಷನಿ ಆರ್ ನಾಯಕ್, ಆನ್. ಗೀತಾ ಟಿ.ಬಿ. ಶೆಟ್ಟಿ, ಸುಮಿತ್ರ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಿಕ್ಷಕಿಯರಾದ ಪ್ರತಿಮಾ, ಸವಿತಾ ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಅಪೇಕ್ಷ ಸ್ವಾಗತಿಸಿದರು. ಜೋಯಾನ ಪರ್ಲ್ ನಿರೂಪಣೆ ಮತ್ತು ಧನ್ಯವಾದ ಗೈದರು.
















