ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ವತಿಯಿಂದ ಬಿಜೂರು ಗ್ರಾಮದ ಶ್ರೀ ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಯಿತು.
ಪಂಚಾಂಗ ಶ್ರವಣ ಮಾಡಿ ಯುಗಾದಿಯ ಆಚರಣೆಯ ಕುರಿತು ವಿಶೇಷ ಉಪನ್ಯಾನ ನೀಡಿದ ವೇದಮೂರ್ತಿ ಯೋಗೀಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ವಲಯದ ಮಹಿಳಾ ವೇದಿಕೆಯ ಸದಸ್ಯರು ವಿಷ್ಣು ಸಹಶ್ರನಾಮ ಪಠಿಸಿದರು.

ವಲಯಾಧ್ಯಕ್ಷ ಯು. ಸಂದೇಶ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಕ್ಕಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಶ್ವರರಾದ ವೇದಮೂರ್ತಿ ಗುರುರಾಜ್ ಭಟ್, ಕೊಲ್ಲೂರು ಶ್ರೀ ಮುಕಾಂಬಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ನಾಗರಾಜ ಭಟ್, ದೀಟಿ ಸೀತಾರಾಮ್ ಮಯ್ಯ, ರತ್ನಾಕರ ಉಡುಪ, ಜಗದೀಶ ರಾವ್ ಹೆಚ್, ಗಣೇಶ್ ಮಯ್ಯ, ಯುವ ವೇದಿಕೆಯ ಅಧ್ಯಕ್ಷ ಪದ್ಮನಾಭ ಹೆಬ್ಬಾರ್, ಅರುಣ್ ಶಾನುಭಾಗ್, ಮಹಿಳಾ ವೇದಿಕೆಯ ಅಧ್ಯಕ್ಷೆ ವೀಣಾ ಹೆಬ್ಬಾರ್, ಗುರುರಾಜ್ ಹೆಬ್ಬಾರ್, ಯೋಗೀಶ್ ಕಾರಂತ್ ಮಹಿಳಾ ವೇದಿಕೆಯ ಕಾರ್ಯದರ್ಶಿ ವಿಧ್ಯಾ ಅಡಿಗ ಉಪಸ್ಥಿತರಿದ್ದರು.
ವಾರ್ಷಿಕ ಅಧೀವೇಶನದ ಲೆಕ್ಕಾಚಾರವನ್ನು ಮಂಡಿಸಲಾಯಿತು. ಕಾರ್ಯಕಾರಿ ಮಂಡಳಿಯ ರಚನೆಯ ಕುರಿತು ವಿಶೇಷ ಮಹಾಸಭೆ ಕರೆಯಲು ತಿರ್ಮಾನಿಸಲಾಯಿತು. ಕಾರ್ಯದರ್ಶಿ ಪ್ರಶಾಂತ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು.










