ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಡೇಶ್ವರ ಶಾಲೆ ಹಿಂಭಾಗದ ತೋಟದ ಮನೆ ರಸ್ತೆ ಎಂಬಲ್ಲಿ ಕುಟುಂಬಗಳ ಮಧ್ಯೆ ನಡೆಯುವ ದಾರಿಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂಬಂಧ ಎರಡು ಕುಟುಂಬದ ಪ್ರಮುಖರು ಹಾಜರಿದ್ದು ಅಧಿಕಾರಿಗಳ ಮುಂದೆ ತಮ್ಮ ಅಹವಾಲುಗಳನ್ನು ಮಂಡಿಸಿದರು.

ಈ ಬಗ್ಗೆ ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿ ನಡೆಯುವ ದಾರಿಯನ್ನು ರಸ್ತೆಯಾಗಿಸಿಕೊಳ್ಳಿ ಕಲಹ ಒಳ್ಳೆದಯದಲ್ಲ ಬದಲಾಗಿ ನಿಮ್ಮೊಳಗೆ ಪರಿಹಾರ ಕಂಡುಕೊಳ್ಳಿ ಕಾನೂನಿನ ಮೂಲಕ ಹೊದರೆ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದು ಕಿವಿ ಮಾತು ಹೇಳಿದರು.
ಈ ಬಗ್ಗೆ ಎರಡು ಕುಟುಂಬಗಳ ಮಧ್ಯೆ ಮಾತುಕತೆ ಮುರಿದು ಬಿದ್ದ ಪರಿಣಾಮ ಸ್ಥಳದಿಂದ ಅಧಿಕಾರಿಗಳು ನಿರ್ಗಮಿಸಿದರು. ಪಾಂಡೇಶ್ವರ ಗ್ರಾಮ ಆಡಳಿತಾಧಿಕಾರಿ ಐರಿನ್ ಶಾಂತಿ ಫೇರೆರಾ, ಸಹಾಯಕ ಶ್ರೀಧರ ಗಾಣಿಗ, ಪಾಂಡೇಶ್ವರ ಪಂಚಾಯತ್ ಮಾಜಿ ಉಪಾಧ್ಯಕ್ಷ ವೈಬಿ ರಾಘವೇಂದ್ರ ಇದ್ದರು.










