ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಬಂಧಿಸಿದ ಘಟನೆ ಇಲ್ಲಿನ ಹೇರೂರು ಗ್ರಾಮದ ಯರುಕೋಣೆ ಎಂಬಲ್ಲಿ ನಡೆದಿದೆ.
ಕಿರಿಮಂಜೇಶ್ವರ ಗ್ರಾಮದ ಲಕ್ಷ್ಮಣ ನಾಯ್ಕ (43), ನಾವುಂದ ಗ್ರಾಮದ ಉಮೇಶ ದೇವಾಡಿಗ (53), ಹೇರೂರು ಗ್ರಾಮದ ಶೀನ ಪೂಜಾರಿ (62), ಹೇರೂರು ಗ್ರಾಮದ ಉದಯ ಶೆಟ್ಟಿ (60) ಬಂಧಿತ ಆರೋಪಿಗಳು.
ಆರೋಪಿಗಳಿಂದ ಅಂದರ್ – ಬಾಹರ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ 2,560/, ಇಸ್ಪೀಟ್ ಎಲೆಗಳು, ಒಂದು ಬೆಡ್ ಸೀಟ್, ಒಂದು ನೋಟ್ ಪುಸ್ತಕ, ಹಾಗೂ ಒಂದು ಬಾಲ್ ಪೆನ್ ಅನ್ನು ಸ್ವಾದೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










