Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಜಿಲ್ಲೆಯ ಗೃಹಬಳಕೆ ಗ್ರಾಹಕರಿಗೆ ಅನಿಲ ವಿತರಣೆಯಲ್ಲಿ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ: ಸಂಸದ ಕೋಟ
    ಉಡುಪಿ ಜಿಲ್ಲೆ

    ಜಿಲ್ಲೆಯ ಗೃಹಬಳಕೆ ಗ್ರಾಹಕರಿಗೆ ಅನಿಲ ವಿತರಣೆಯಲ್ಲಿ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ: ಸಂಸದ ಕೋಟ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಉಡುಪಿ: ಜಿಲ್ಲೆಯ ಗೃಹ ಬಳಕೆ ಗ್ರಾಹಕರಿಗೆ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಸಿಲಿಂಡರ್ ವಿತರಣಾ ಸಂಸ್ಥೆಯವರಿಗೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

    Click Here

    Call us

    Click Here

    ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ  ಸಭಾಂಗಣದಲ್ಲಿ ಗೃಹ ಬಳಕೆ ಸೇರಿದಂತೆ ಮತ್ತಿತರ ಅನಿಲ  ವಿತರಣೆ ಕುರಿತ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಗಳ ವಿತರಣೆ, ಅದರಲ್ಲಿಯು ಏಕ ಸಿಲಿಂಡರ್ ಹೊಂದಿರುವವರಿಗೆ ವಿತರಣೆ ಯಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿವೆ.

    ಈ ಹಿಂದೆ ಬೇಡಿಕೆಗೆ ಅನುಗುಣವಾಗಿ ಅನಿಲ ಲಭ್ಯ ವಾಗುತ್ತಿತ್ತು. ಪಶ್ಚಿಮ ಎಷ್ಯಾ ದೇಶಗಳಲ್ಲಿನ ಯುದ್ಧ ದ ಬಿಕ್ಕಟಿನ್ನಿಂದಾಗಿ ಸಮರ್ಪಕವಾಗಿ ಅನಿಲಗಳು ಆಮದು ಆಗದೆ ಇರುವ ಹಿನ್ನೆಲೆ, ಸ್ವಲ್ಪ ತೊಂದರೆಗಳು ಉಂಟಾಗಿವೆ. ಆದರೆ ಗೃಹ ಬಳಕೆ ಅನಿಲಗಳ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವಿತರಿಸಲು ಸರಕಾರ ಬದ್ಧವಿದೆ.ಗೃಹ ಬಳಕೆ ವಿತರಣೆಯಲ್ಲಿ ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗೆಗೆ ಹಾಗೂ ವಿತರಣಾ ಸಂಸ್ಥೆಯವರಿಗೆ ಸೂಚಿಸಿದರು.

     ವಾಣಿಜ್ಯ ಬಳಕೆಯ ಗ್ರಾಹಕರಿಗೆ ಶೇ. 20 ರಷ್ಟು  ಪ್ರಮಾಣದಲ್ಲಿ ಕೊಡುವ ಉದ್ದೇಶ ಸರಕಾರ ಹೊಂದಿರುವ ಬಗ್ಗೆ ಸರಕಾರ ತಿಳಿಸಿದೆ. ವಿದ್ಯಾರ್ಥಿ ನಿಲಯಗಳಿಗೆ, ಆಸ್ಪತ್ರೆ, ಶಾಲೆ ಸೇರಿದಂತೆ ಮತ್ತಿತರ ಅತೀ ಅಗತ್ಯ ವಿರುವ ಸಂಸ್ಥೆಗಳಿಗೆ ಆದ್ಯತೆಯ ಮೇಲೆ ವಾಣಿಜ್ಯ ಸಿಲಿಂಡರ್ ಗಳ ವಿತರಣೆಯನ್ನು ಮಾಡಬೇಕು ಎಂದ ಅವರು,  ಮಣಿಪಾಲ ವ್ಯಾಪ್ತಿಯಲ್ಲಿ ವಾಣಿಜ್ಯ ಸಿಲಿಂಡರ್ ನೋಂದಾಯಿತ ಗ್ರಾಹಕರಿಗೆ ನೋಂದಣಿ ಮಾಡಿಕೊಂಡ ಸಂಸ್ಥೆಗಳಿಂದ ಅನಿಲ ವಿತರಣೆ ಆಗುತ್ತಿಲ್ಲ. ಇದರಿಂದ ತೊಂದರೆ ಉಂಟಾಗುತ್ತಿದೆ. ನೋಂದಾಣಿಯನ್ನು  ಇತರೆ ಸಂಸ್ಥೆಗಳಿಗೆ ವರ್ಗಾಯಿಸುವುದು ಅವಶ್ಯವಿದ್ದು, ಈ ಬಗ್ಗೆ ಅನಿಲ ಕಂಪನಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

    ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ವಿತರಣೆಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ. ಆದರೆ ಅನಧಿಕೃತವಾಗಿ ದಾಸ್ತಾನು ಮಾಡದಂತೆ ಎಚ್ಚರ ವಹಿಸಬೇಕು. ಈಗಾಗಲೇ ಕೆಲವು ಗ್ರಾಹಕರು ಸಾಕಷ್ಟು ದಿನಗಳಿಂದ ಜನರೇಟರ್ ಗಳಿಗೆ ಹಾಗೂ ಮೀನುಗಾರಿಕಾ ಬೋಟ್ ಗಳಿಗೆ, ನಿರಂತರವಾಗಿ ಕೊಂಡೋಯುವವರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

    Click here

    Click here

    Click here

    Click Here

    Call us

    Call us

    ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ವಾಹನಕ್ಕೆ ಬಳಕೆ ಮಾಡುವ ಎಲ್ ಪಿ ಜಿ ಹಾಗೂ ಸಿ ಎನ್ ಜಿ ಅನಿಲಗಳನ್ನು ಆಯಿಲ್ ಕಾರ್ಪೋರೇಶನ್ ಸಂಸ್ಥೆಗಳು   ನಿಗಧಿಪಡಿಸಿರುವ ದರದಲ್ಲಿಯೇ ವಿತರಿಸಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. ನಿಗಧಿಪಡಿಸಿರುವ ಮೊತ್ತವನ್ನು ಹಾಗೂ ದಾಸ್ತನನ್ನು ತಮ್ಮ ವಿತರಣಾ ಕೇಂದ್ರದಲ್ಲಿ ಜನಸಾಮಾನ್ಯರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು, ಒಂದೊಮ್ಮೆ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂಥವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಗೃಹ ಬಳಕೆ ಸಿಲಿಂಡರ್ ಗಳನ್ನು ಇತರೆ ಉದ್ದೇಶಕ್ಕೆ ಬಳಸದಂತೆ ನೋಡಿಕೊಳ್ಳಬೇಕು ಒಂದೊಮ್ಮೆ ಇತರೆ ಉದ್ದೇಶಕ್ಕೆ ಬಳಸಿದಲ್ಲಿ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

    ಏಕ ಬಳಕೆ ಸಿಲಿಂಡರ್ ಹೊಂದಿರುವ ಗ್ರಾಹಕರುಗಳು, ಸಿಲಿಂಡರ್ ಪಡೆದ  25 ದಿನಗಳ ನಂತರ ಹಾಗೂ ಎರಡು ಸಿಲಿಂಡರ್ ಹೊಂದಿರುವ ಗ್ರಾಹಕರುಗಳು ಅನಿಲ ಪೂರೈಕೆ ಮಾಡಿದ 35 ದಿನಗಳ ನಂತರ ಬುಕಿಂಗ್ ಮಾಡಲು ಅವಕಾಶವಿದೆ. ಆದಷ್ಟು ಮನೆ ಮನೆಗೆ ಗೃಹ ಬಳಕೆಯ ಸಿಲಿಂಡರ್ ವಿತರಣೆ ಮಾಡುವುದರೊಂದಿಗೆ ಏಜನ್ಸಿ ಗಳ ಮುಂದೆ ಸಾಲುಗಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ವಿತರಕರಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಎ.ಎಸ್.ಪಿ ಸುಧಾಕರ್ ನಾಯಕ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ,  ಗ್ಯಾಸ್ಏಜನ್ಸಿ ಹಾಗೂ ಬಂಕುಗಳ  ಮಾಲೀಕರುಗಳು, ವಿತರಕರುಗಳು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್‌ ಸಂಧ್ಯಾ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿ ದಿನಾಚರಣೆ

    20/05/2026

    ಕೆಎಂಡಿಸಿ ಸಾಲ: ಒಟಿಎಸ್ ಮೂಲಕ ಬಡ್ಡಿ ಮನ್ನಾ

    20/05/2026

    ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    20/05/2026
    Leave A Reply Cancel Reply

    3 × 2 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.