ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ 2026ನೇ ಸಾಲಿನ ‘ಯುವ’ ಅಂತರ್-ಕಾಲೇಜು ಸಾಂಸ್ಕೃತಿಕ ಮತ್ತು ವ್ಯವಹಾರ ನಿರ್ವಹಣೆ ಸ್ಪರ್ಧೆಯಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ತಂಡವು ಸಮಗ್ರ ಪುರಸ್ಕಾರವನ್ನು ಗಳಿಸಿದೆ.

ನಿಖಿಲ್ ಮತ್ತು ವೇದಾಂತ ಬ್ಯುಸಿನೆಸ್ ಕ್ವಿಜ್‌ನಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ಸದಸ್ಯರನ್ನು ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿಯವರು, ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ, ಬೋಧಕ-ಬೋಧಕೇತರರು ಅಭಿನಂದಿಸಿದ್ದಾರೆ.










