ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಘಟಕ ಆಶ್ರಯದಲ್ಲಿ ’ವೃತ್ತಿ ಯೋಜನೆ’ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪೋಲೀಸ್ ಉಪನಿರೀಕ್ಷಕ (ಸಿವಿಲ್) ಅಧಿಕಾರಿಯಾದ ಆಶ್ರೀತಾ ಎ. ಶೆಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉದ್ಯೋಗವನ್ನು ಸರಿಯಾಗಿ ಆಯ್ಕೆ ಮಾಡಿಕೊಂಡು ಅದಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುವ ಸ್ಪರ್ಧಾತ್ಮಕ ಪರೀಕ್ಷೆಗಳು ಉದ್ಯೋಗವಕಾಶದ ಕುರಿತು ಮಾತನಾಡುತ್ತಾ ಕಾಲೇಜುಗಳಲ್ಲಿ ನಡೆಸುವ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ವೃತ್ತಿ ಯೋಜನಾ ಮುಂದಾಳತ್ವ ಬೆಳೆಸುವುದಲ್ಲದೇ ಆತ್ಮವಿಶ್ವಾಸ ಮತ್ತು ಉತ್ತಮ ನಿರ್ಧಾರಗಳನ್ನು ಕಾಲೇಜು ದಿನಗಳಲ್ಲಿಯೇ ತೆಗೆದುಕೊಂಡಾಗ ಮಾತ್ರ ಭವಿಷ್ಯದ ಯಶಸ್ಸಿಗೆ ಒಂದು ನೆಲೆ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಶೆಟ್ಟಿ, ವಿದ್ಯಾರ್ಥಿಕ್ಷೇಮಪಾಲನ ಅಧಿಕಾರಿ ಸೂರಜ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಮೋಹನ ಕೆ. ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಡಾ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರಾದ ಕಾರ್ಯಕ್ರಮದ ಸಂಯೋಜಕರಾದ ಕುಮಾರ ಪಿ. ಸ್ವಾಗತಿದರು. ವಿದ್ಯಾರ್ಥಿನಿ ಸಂಜನಾ ಧನ್ಯವಾದಗೈದರು.










