ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜು ಶೇ.93 ಫಲಿತಾಂಶವನ್ನು ದಾಖಲಿಸಿದ್ದು, ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶವನ್ನು ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ ಮನ್ವಿತಾ (557) ಅಂಕಗಳನ್ನು ಪಡೆದು ಪ್ರಥಮ ಸ್ಥಾನಗಳಿಸಿದ್ದಾರೆ. ಶಾಂಭವಿ (517), ಸಂಕೇತ್ ನಾರಾಯಣ ಪೂಜಾರಿ (512) ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರೀತಿ (586) ಅಂಕಗಳನ್ನು ಪಡೆಯುವ ಮೂಲಕ ಬೈಂದೂರು ತಾಲೂಕಿಗೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾರೆ. ವೈಷ್ಣವಿ (578), ಶಕುಂತಲಾ (565), ನಾಗಶ್ರೀ (533), ಧೀರಜ್ (520), ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ.










