ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2025 -26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -1ರ ಫಲಿತಾಂಶವು ಪ್ರಕಟವಾಗಿದ್ದು, ಇದರಲ್ಲಿ ಬ್ಯಾರಿಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 100% ಫಲಿತಾಂಶದೊಂದಿಗೆ ಅತ್ಯುತ್ತಮ ಸಾಧನೆ ಮಾಡುವುದರ ಮೂಲಕ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಹಾಗೂ ಕಲಾ ವಿಭಾಗದ ಒಟ್ಟು 92 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 62 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ವಿಶೇಷ ಸಾಧನೆ ಮಾಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ತ್ರಿಶಾ -577 (96.16%), ಮೊಹಮ್ಮದ್ ರಿಲಾ -564 (94%), ಇರ್ಫಾನ್ ಶರ್ಫುದ್ದಿನ್ -554 (92.33% ) ಫಾತಿಮಾ ನಿಶಾ -543 (90.5%), F M ಜಿಫಾನ್ -539 (89.83%), ಆಯಿಷಾತುಲ್ ಮುಜೈನ -530 (88.33%), ಆಫೀಯಾ -529 (88.16%), ಕೃಷ್ಣ -528 (88%) ಅಂಕಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನಮಿಷ -570 (95%), ಕಶಿಫಾ – 556 (92.6%), ಅಸಿಫಾ – 542 (90.33%), ಡೆಲ್ ಸ್ಟನ್ – 525(87.5%) ನಸ್ರಿನ್ – 520(86.66%), ಮೊಹಮ್ಮದ್ ಶಿಹಾಬ್ -519 (86.5%), ನಜಿಫಾ -515 (85. 83%) ಆಯಿಷಾ ನದ – 511 (85%) ಅಂಕಗಳಿಸಿದ್ದಾರೆ.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಬ್ಯಾರಿ, ಟ್ರಸ್ಟಿಯಾದ ಡಾ. ಆಸೀಫ್ ಬ್ಯಾರಿ, ನಿರ್ದೇಶಕಿ ಹಾಗೂ ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಶ್ವಿನಿ ಶೆಟ್ಟಿ ಆಡಳಿತ ಮಂಡಳಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿಶೇಷ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
















