ಕುಂದಾಪ್ರ ಡಾಟ್ ಕಾಂ ಸುದ್ದಿ.
ಹೆಬ್ರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತನ್ನ ತಾಯಿಯೊಂದಿಗೆ ಇರುವ ಚಿತ್ರವನ್ನು ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಪಿಯುಸಿ ವಿದ್ಯಾರ್ಥಿ ಪರೀಕ್ಷಿತ್ ಮಂದಾರ ಆಚಾರ್ ಬಿಡಿಸಿ ಉಡುಪಿಗೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿದ ವೇಳೆ ಪ್ರಧಾನಿ ಜೊತೆ ಆಗಮಿಸಿದ ತಂಡಕ್ಕೆ ಹಸ್ತಾಂತರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯೊಂದಿಗೆ ಇರುವ ಚಿತ್ರವನ್ನು ಬಿಡಿಸಿ ಪರೀಕ್ಷಿತ್ ಮಂದಾರ ಆಚಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಪ್ರಧಾನಿಯಿಂದ ಚಿತ್ರಕಲಾವಿದ ಪರೀಕ್ಷಿತ್ ಮಂದಾರ ಆಚಾರ್ ಅವರಿಗೆ ಅಭಿನಂದನಾ ಪತ್ರ ಲಭಿಸಿದೆ.

ಪತ್ರಿಕಾ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಆ ಚಿತ್ರವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ್ದರು. ಬಹುಮುಖ ಪ್ರತಿಭೆಯ ಪರೀಕ್ಷಿತ್ ಆಚಾರ್ ಬ್ರಹ್ಮಾವರ ತಾಲ್ಲೂಕು ನಾಲ್ಕೂರು ಗ್ರಾಮ ಮಾರಾಳಿಯ ಮಂದಾರ ಆಚಾರ್ ವೀಣಾ ಆಚಾರ್ ದಂಪತಿಯ ಪುತ್ರ. ಪರೀಕ್ಷಿತ್ ಸಹೋದರಿ ಎಸ್. ಆರ್. ವಿದ್ಯಾರ್ಥಿನಿ ಪ್ರಣಮ್ಯ ಆಚಾರ್ ಕೂಡ ಬಹುಮುಖ ಪ್ರತಿಭೆಯಾಗಿದ್ದಾರೆ.










