ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮ ಇದು ಎಲ್ಲರಲ್ಲಿಯೂ ಇರಬೇಕು. ಆಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ. ಕಲೆ, ಪತ್ರಿಕೆ ಗಳು ನಮ್ಮಲ್ಲಿ ಸುಸಂಸ್ಕೃತ, ನಾಗರಿಕ ಪ್ರಜ್ಞೆಯನ್ನು ಬೆಳೆಸುತ್ತದೆ. ಕುಂದಾಪುರ ಮಾತ್ರವಲ್ಲದೆ ಇಡೀ ಕರಾವಳಿಯೇ ಅದ್ಭುತ ಜ್ಞಾನ ಭಂಡಾರದ ನಗರಿ ಎಂದು ಮೂಡುಬಿದಿರೆ ಜೈನಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಹೇಳಿದರು.
ಅವರು ರವಿವಾರ ಭಂಡಾರ್‌ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ಕೊಡಮಾಡುವ ಕೋ.ಮ. ಕಾರಂತ ಪ್ರಶಸ್ತಿಯನ್ನು ಎಂಜಿನಿಯರ್, ಕುಂಚ ಕಲಾವಿದ, ಫೈವಿ ಟೆಕ್ನಾಲಿಜಿಸ್‌ನ ತಾಂತ್ರಿಕ ನಿರ್ದೇಶಕ ಬಳ್ಳೂರು ಜಯರಾಮ ಉಡುಪ ಅವರಿಗೆಪ್ರದಾನ ಮಾಡಿ ಆಶೀರ್ವಚನ ನೀಡಿದರು.

ಪತ್ರಿಕೆಗಳು ಸಮಾಜವನ್ನು ಸುಧಾರಿಸುವ ಕಾವ್ಯವನ್ನು ಮಾಡುವುದರ ಜತೆಗೆ, ನಮ್ಮನ್ನು ತಿದ್ದಿ ತೀಡುವ ಕೆಲಸವನ್ನು ಮಾಡುತ್ತದೆ. ಮನಸ್ಸಿನಲ್ಲಿ ಸೃಜನಶೀಲತೆ ಇರಲಿ. ಬೇರೆ ಯವರ ಬದಲು ನಮ್ಮನ್ನು ನಾವು ವಿಮರ್ಶೆ ಮಾಡೋಣ. ಭಾಷೆ ಕಲಿಯಲು ವಯಸ್ಸಿನ ಅಡ್ಡಿಯಿಲ್ಲ ಎಂದ ಅವರು, ಪ್ರಶಸ್ತಿ ಪುರಸ್ಕೃತರಾದ ಜಯರಾಮ ಉಡುಪರು ಎಂಜಿನಿಯರ್ ಆಗಿ ಆತ್ಮ ನಿರ್ಭರ ಭಾರತಕ್ಕೆ ಕೊಡುಗೆ ನೀಡಿದ ಸೇನಾನಿಯಾಗಿ, ಕುಂಚೆ ಕಲೆಯ ಮೂಲಕ ಸಭ್ಯ ನಾಗರಿಕರನ್ನು ಎಚ್ಚರಿ ಸುವ ಕಾಯವನ್ನು ಮಾಡುತ್ತಿದ್ದಾರೆ ಎಂದರು.

ಕಾಲೇಜಿನ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ. ಶಾಂತಾರಾಮ ಪ್ರಭು ಅವರು ಕುಂದಾಪ್ರ ಡಾಟ್ ಕಾಂ ಸುದ್ದಿಸಂಸ್ಥೆಯ ಸಂಪಾದಕ, ಪತ್ರಕರ್ತ ಸುನಿಲ್ ಹೆಚ್. ಜಿ. ಅವರನ್ನು ಸಮ್ಮಾನಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಡಿ ಉದ್ಘಾಟಿಸಿ, ಶುಭಹಾರೈಸಿದರು. ಹವ್ಯಾಸಿ ಕಲಾವಿದ ಡಾ| ಹೆಚ್. ರಾಮ್ ಮೋಹನ್ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು.
ದಿ| ಕೋ. ಶಿವಾನಂದ ಕಾರಂತರ ಸ್ಮರಣೆ ಯಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ಚಿತ್ರಕಲಾ ಪ್ರದರ್ಶನ ನಡೆಯಿತು. ‘ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು. ಎಸ್. ಶೆಣೈ ಸ್ವಾಗತಿಸಿ, ಶಿಕ್ಷಕ ವಿಶ್ವನಾಥ ಕರಬ ನಿರೂಪಿಸಿದರು.
















