ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಶಂಕರನಾರಾಯಣದ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625 ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಾಲೂಕಿನ ಬಿದ್ಕಲಕಟ್ಟೆಯ ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿಗಳ ಪುತ್ರ ಪ್ರೀತಮ್ ಪೂಜಾರಿ ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.
ಎಲ್ ಕೆ ಜಿ ಯಿಂದ 10 ನೇ ತರಗತಿಯವರೆಗೆ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಶಾಲೆಯಲ್ಲೇ ಓದಿರುವ ಪ್ರೀತಮ್ ಜಿ ಪೂಜಾರಿಯವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಬೋಧಕ ವೃಂದ ಹರ್ಷ ವ್ಯಕ್ತಪಡಿಸಿದೆ.
ಇದನ್ನೂ ಓದಿ ► ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣ – ವಿಜ್ಞಾನ (PCMB / PCMCs) ವಿಭಾಗದಲ್ಲಿ ಉತ್ತಮ ಶೈಕ್ಷಣಿಕ ಸಾಧನೆ. ಪ್ರವೇಶಾತಿ ಪ್ರಾರಂಭ – https://kundapraa.com/?p=97752 .
ತಂದೆ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದು ತಾಯಿ ನಾಗರತ್ನ ಗೃಹಿಣಿ. ದಂಪತಿಗಳ ದ್ವಿತೀಯ ಪುತ್ರ ಇದೇ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾನೆ.
► ಮದರ್ ತೆರೆಸಾ ಪಿಯು ಕಾಲೇಜು ಶಂಕರನಾರಾಯಣ – ವಾಣಿಜ್ಯ ವಿಭಾಗದ ಅತ್ಯುತ್ತಮ ಸಾಧನೆ. ಪ್ರವೇಶಾತಿ ಪ್ರಾರಂಭ – https://kundapraa.com/?p=97738 .
ಕರ್ನಾಟಕ ರಾಜ್ಯ SSLC ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಶೇಕಡಾ 94 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
















