Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪಂಚವರ್ಣದಿಂದ 300ನೇ ವಾರ ಕೋಡಿಯಿಂದ ಕೋಟದವರೆಗೆ 5ವರೆ ಕಿ.ಮೀ ಬೀಚ್ ಕ್ಲಿನಿಂಗ್ ಕಾರ್ಯಕ್ರಮ
    ಊರ್ಮನೆ ಸಮಾಚಾರ

    ಪಂಚವರ್ಣದಿಂದ 300ನೇ ವಾರ ಕೋಡಿಯಿಂದ ಕೋಟದವರೆಗೆ 5ವರೆ ಕಿ.ಮೀ ಬೀಚ್ ಕ್ಲಿನಿಂಗ್ ಕಾರ್ಯಕ್ರಮ

    Updated:21/05/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಕೋಟ: ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗದ ಸಹಯೋಗದೊಂದಿಗೆ ಪ್ರತಿ ಭಾನುವಾರದ ಆಯೋಜಿಸಿಕೊಂಡು ಬರುತ್ತಿರುವ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನಕ್ಕೆ ಇದೀಗ 300ನೇ ವಾರದ ಸಂಭ್ರಮ, ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡ ಈ ಸಂಘಟನೆ ಪ್ರತಿ ಭಾನುವಾರ ಬಂತ್ತೆಂದರೆ ಜಿಲ್ಲೆಯ ವಿವಿಧ ಗ್ರಾಮಪಂಚಾಯತ್ ವ್ಯಾಪ್ತಿಯ ಬೀಚ್ ಹಾಗೂ ಒಳರಸ್ತೆಗಳಲ್ಲಿನ ತ್ಯಾಜ್ಯ ಮುಕ್ತಗೊಳಿಸುವ ಜತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಇವರ ಈ ಕೈಂಕರ್ಯಕ್ಕೆ ಇದೀಗ ಇದೇ ಮೇ.3ರಂದು ಪೂರ್ವಾಹ್ನ 7.ಗ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಮುನ್ನುಡಿ ಬರೆಯಲಿದೆ.

    Click Here

    Call us

    Click Here

    ಕೋಡಿ ಗ್ರಾಮಪಂಚಾಯತ್ ಮೂಲಕ ಪ್ರಾರಂಭಿಸಿಕೊಳ್ಳುವ ಈ ಅಭಿಯಾನ ಸಾಲಿಗ್ರಾಮ ಪಟ್ಟಣಪಂಚಾಯತ್, ಕೋಟತಟ್ಟು ಗ್ರಾಮಪಂಚಾಯತ್, ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಎಲ್ಲಾ ಭಾಗಗಳ ಬೀಚ್ ಕ್ಲಿನಿಂಗ್ ಆಯ್ಕೆಗೊಳಿಸಿದ್ದು ಇದರ ತಯಾರಿಗಳು ಈಗಾಗಲೇ ಪೂರ್ಣಗೊಳಿಸಿದೆ.

    ಸಮಾಜ ಸೇವಕ ಆನಂದ್ ಸಿ. ಕುಂದರ್ 78ನೇ ಹುಟ್ಟುಹಬ್ಬಕ್ಕೆ ಸಮರ್ಪಿತ ಕಾರ್ಯಕ್ರಮ:
    ಪಂಚವರ್ಣ ಸಂಘಟನೆ ಈ ಪರಿಸರಸ್ನೇಹಿ ಅಭಿಯಾನ ಪ್ರಾರಂಭಿಸಿಕೊಂಡ ದಿನಾಂಕದಿಂದ ಹಿಡಿದು ಇಲ್ಲಿಯವರೆಗೆ ಈ ಸಂಘಟನೆಗೆ ಬೆನ್ನೆಲುಬಾಗಿ ಜಿಲ್ಲಾಡಳಿತ, ಸ್ಥಳೀಯಾಡಳಿತಗಳು ಇದ್ದರೂ ಇಲ್ಲಿನ ಸಮಾಜಸೇವಕ ಆನಂದ್ ಸಿ. ಕುಂದರ್ರವರ ಪ್ರೋತ್ಸಾಹ ಈ ಸಂಘಟನೆಗೆ ಆಧಾರಸ್ಥಂಭವಾಗಿ ಕಾರ್ಯನಿರ್ವಹಿಸಿದೆ.

    ಈ ಹಿನ್ನಲ್ಲೆಯಲ್ಲಿ 200ನೇ ವಾರದ 5.5 ಕಿಮೀ ಬೀಚ್ ರಸ್ತೆ ಕುಂದರ್ ರವರ 75ನೇ ಹುಟ್ಟುಹಬ್ಬಕ್ಕೆ ಈ ಸಂಘಟನೆ ಸಮರ್ಪಿಸಿಕೊಂಡಿದೆ. ಅದೆಂತೆ ಇದೀಗ 300ನೇ ವಾರ ಕೂಡ ಅವರ 78ನೇ ವರ್ಷೋತ್ಸವಕ್ಕೆ ಸಮರ್ಪಿಸಲು ಅಣಿಯಾಗಿದೆ.

    ಜಿಲ್ಲಾಡಳಿತದ ನೆರವು:
    ಈಗಾಗಲೇ ಸ್ಥಳೀಯಾಡಳಿತಗಳು ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿಕೊಂಡಿದ್ದು ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ,ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವಿಶೇಷ ಮುತುವರ್ಜಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

    Click here

    Click here

    Click here

    Click Here

    Call us

    Call us

    ಹೇಗಿದೆ ತಯಾರಿ ಎಲ್ಲೆಲ್ಲಿ ಕ್ಲಿನಿಂಗ್ ಸ್ಪಾಟ್:
    ಕೋಡಿ ಗ್ರಾ.ಪಂ ನಿಂದ ಕೋಟ ಗ್ರಾ.ಪಂ ವರೆಗಿನ 5.5 ಕೀ.ಮೀ ಬೀಚ್ ಕ್ಲಿನಿಂಗ್ ಕಾರ್ಯಕ್ರಮ ಯಶಸ್ವಿ ಹಲವು ಭಾಗಗಳನ್ನು ಆಯ್ಕೆಗೊಳಿಸಲಾಗಿದೆ. ಅದರಲ್ಲಿ ಕೋಡಿ ಹೊಸಬೇಂಗ್ರೆ ಬೀಚ್,ರಾಮಮಂದಿರ ಸಮೀಪ, ಮಹಾಸತೀಶ್ವರಿ ಬೀಚ್,ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಜಯಂತ್ ಸಾಲಿಯಾನ್ ಬೀಚ್,ಕೋಟತಟ್ಟು ಹಾಗೂ ಪಟ್ಟಣಪಂಚಾಯತ್ ನಡುವಿನ ಪಂಡುವಣ್ಣ ಹೋಟೆಲ್ ಸಮೀಪ, ಕೋಟತಟ್ಟು ಗ್ರಾ.ಪಂ.ನ ರಾಮಮಂದಿರ ಸಮೀಪ,ಕಾರಂತರ ಹೋಟೆಲ್ ಸಮೀಪ ಬೀಚ್, ಶಿರಸಿ ಮಾರಿಯಮ್ಮ ಕಡುವಿನ ಬೀಚ್,ತದನಂತರ ಕೊನೆಯದಾಗಿ ಕೋಟ ಪಂಚಾಯತ್ ಮಣೂರು ಆನಂದ್ ಸಿ. ಕುಂದರ್ ಮನೆ ಕಡುವಿನ ಬೀಚ್ನಲ್ಲಿ ಸಮಾರೋಪ ನಡೆಯಲಿದೆ.

    ಯಾವಾವ ಸಂಘಟನೆ, ಶಿಕ್ಷಣ ಸಂಸ್ಥೆಗಳು ಭಾಗಿ:
    ಈ ಬೃಹತ್ ಬೀಚ್ ಕ್ಲಿನಿಂಗ್ ಅಭಿಯಾನದಲ್ಲಿ ಈಗಾಗಲೇ ಹಲವು ಸಂಘಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳು ಭಾಗಿಯಾಗಲಿವೆ ಅವುಗಳಲ್ಲಿ ಆಶ್ರೀತ್ ಸಮೂಹ ಶಿಕ್ಷಣ ಸಂಸ್ಥೆಗಳು, ಎಂ.ಐ.ಟಿ ಮಣಿಪಾಲ,ಎಂ.ಐ.ಟಿ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಟೆಕ್ನಾಲಾಜಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆಯ ವಿವಿಧ ವಲಯ ಒಕ್ಕೂಟ ಇದರ ಶೌರ್ಯ ಟೀಮ್,ಮೊಗವೀರ ಯುವ ಸಂಘಟನೆ ಜಿಲ್ಲಾ ವಿವಿಧ ಘಟಕಗಳು,

    ಲಕ್ಷ್ಮೀಸೋಮಬಂಗೇರ ಡಿಗ್ರಿ ಕಾಲೇಜು, ವಿವೇಕ ವಿದ್ಯಾಸಂಸ್ಥೆ, ಕೋಟ, ಕೋಟತಟ್ಟು, ಕೋಡಿ ಗ್ರಾಮ ಪಂಚಾಯತ್ಗಳ ಸಂಜೀವಿ ಒಕ್ಕೂಟ, ಸ್ತ್ರೀ ಶಕ್ತಿ ಸಂಘಟನೆಗಳು, ಮಾಜಿ ಪಂಚಾಯತ್ ಪ್ರತಿನಿಧಿಗಳು, ಜನತಾ ಸಮೂಹ ಸಂಸ್ಥೆ ಕೋಟ, ಫಾರ್ಚುನ್ ನರ್ಸಿಂಗ್ ಕಾಲೇಜು ಮಾಬುಕಳ, ಗೀತಾನಂದ ಫೌಂಡೇಶನ್ ಮಣೂರು, ಶ್ರೀರಾಮ ಪರ್ವ ಗೆಳೆಯರ ಬಳಗ ಕೋಡಿ, ಪ್ರಗತಿ ಯುವಕ ಮಂಡಲ ಕೋಡಿ, ಸುಮಧುರ ಯುವಕ ಸಂಘ ಕೋಡಿ, ವಿನ್ ಲೈಟ್ ಸ್ಪೋಟ್ಸ್೯ ಕ್ಲಬ್ ಪಾರಂಪಳ್ಳಿ, ಅರಮ ವಿಜಯ ಸ್ಪೋರ್ಟ್ಸ್ ಕ್ಲಬ್ ಪಡುಕರೆ, ತೋಳಾರ್ ಓಷಿಯನ್ ಪ್ರಾಡೆಕ್ಟ್ ಪಡುಕರೆ, ಪಾಂಚಜನ್ಯ ಸಂಘ ಪಾರಂಪಳ್ಳಿ, ಅಯೋಧ್ಯಾ ಫ್ರೆಂಡ್ಸ್ ಕೋಡಿ, ಕ್ಲಿನ್ ಕುಂದಾಪುರ, ಕ್ಲಿನ್ ತ್ರಾಸಿ, ಕ್ಲಿನ್ ಕಿನಾರ ಬೈಂದೂರು, ಕ್ಲಿನ್ ಹಾವಂಜೆ ತಂಡಗಳು, ಕೋಡಿ ಗ್ರಾ.ಪಂ, ಕೋಟತಟ್ಟು ಗ್ರಾ.ಪಂ, ಕೋಟ ಗ್ರಾ.ಪಂ, ಸಾಲಿಗ್ರಾಮ ಪಟ್ಟಣ ಪಂಚಾಯತ್ಗಳು ಸಹಯೋಗ ನೀಡಲಿದೆ. 

    ಹೇಗಿದೆ ಈ ಯೋಜನೆ:
    ಇದೇ ಮೊದಲ ಬಾರಿ ಈ ಪ್ರಮಾಣದ ದೂರ ಕ್ರಮಿಸುವ ಬೀಚ್ ಕ್ಲಿನಿಂಗ್ ಅಭಿಯಾನ ರಾಜ್ಯದಲ್ಲೆ ಪ್ರಥಮ ಬಾರಿಗೆ ಆಯೋಜನೆಗೊಳ್ಳಲಿದೆ. ಸುಮಾರು 400ಕ್ಕೂ ಅಧಿಕ ಮಂದಿ ಈ ಕ್ಲಿನ್ ಅಭಿಯಾನದಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ಬೆಂಗಳೂರಿನ ಕ್ಯಾಪ್ಸ್ ಫೌಂಡೇಶನ್, ಶ್ರೀ ಕೃಷ್ಣಪ್ರಸಾದ್ ಕ್ಯಾಶು ಇಂಡಸ್ಟ್ರೀಸ್ ವಂಡಾರು, ಕೋಟ ಸಿ ಎ ಬ್ಯಾಂಕ್, ಕೆ.ಎಂ.ಎಫ್ ನಿರ್ದೇಶಕ ಶಿವಮೂರ್ತಿ ಉಪಾಧ್ಯಾ, ಗೀತಾನಂದ ಫೌಂಡೇಶನ್ ಮಣೂರು, ಜನತಾ ಸಮೂಹ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳುಸಂಪೂರ್ಣ ಸಹಕಾರ ನೀಡಲಿದೆ.

    ಸಂಸದರಿಂದ ಚಾಲನೆ: 
    ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರಕಲಿದ್ದು, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯ ಭವಿಷ್ಯ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಚಾಲನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಮಾರೋಪದಲ್ಲಿ ಭಾಗಿಯಾಗಲಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಸ್ವಚ್ಛತಾ ತಂಡಕ್ಕೆ ಗೌರವಾರ್ಪಣೆ,೭೮ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸಮಾಜಸೇವಕ ಆನಂದ್ ಸಿ ಕುಂದರ್ ರವರಿಗೆ ಗೌರವ ಸಂಮ್ಮಾನ ನೆರವೆರಲಿದೆ.

    ನಮ್ಮೂರಿನ ಹೆಮ್ಮೆಯ ಸಂಘಟನೆ ಪಂಚವರ್ಣ ಇವರ ಪ್ರತಿ ಸಮಾಜಮುಖಿ ಕಾರ್ಯಕ್ರಮಗಳ ಜತೆ ಸ್ವಚ್ಛತಾ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಇದೀಗ 300ರ ಅಭಿಯಾನ ಹೊಸ ದಾಖಲೆಯ ಅಭಿಯಾನವಾಗಿ ಮೂಡಿ ಬರಲಿದೆ. 

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ

    21/05/2026

    ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು

    21/05/2026

    ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ

    21/05/2026
    Leave A Reply Cancel Reply

    2 + 1 =

    Call us

    Click Here

    Call us

    Call us

    Call us
    Highest Viewed Recently
    • ಒಡಗಿನ ಶ್ರೀ ನಂದಿಕೇಶ್ವರ ದೇವಸ್ಥಾನದ ಕೆರೆ ಹಸ್ತಾಂತರ ಕಾರ್ಯಕ್ರಮ
    • ಕ್ಯಾಂಪಸ್ ನೇಮಕಾತಿಯಲ್ಲಿ ಮಿಂಚಿದ ಐಎಂಜೆಐಎಸ್‌ಸಿಯ ದ್ವಿತೀಯ ವರ್ಷದ 30 ವಿದ್ಯಾರ್ಥಿಗಳು
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.