ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಆತ್ಮ ಮತ್ತು ಪರಮಾತ್ಮ ಕುರಿತು ವಿಶೇಷ ಆಧ್ಯಾತ್ಮಿಕ ಜಾಗೃತಿಯ ಒಳ ಚಿಂತನ ಶಿಬಿರವು ಕುಂದಾಪುರದ ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ಜೂನ್ 7ರಂದು ಭಾನುವಾರ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮಾನವ ಜೀವನದ ನಿಜವಾದ ಅರ್ಥ, “ನಾನು ಯಾರು?” ಎಂಬ ಮೂಲಭೂತ ಪ್ರಶ್ನೆಗೆ ಉತ್ತರ, ಆತ್ಮಸಾಕ್ಷಾತ್ಕಾರ, ಪರಮಾತ್ಮನೊಂದಿಗೆ ಆತ್ಮದ ಸಂಬಂಧ, ಮನಶಾಂತಿ, ಧ್ಯಾನದ ಮಹತ್ವ ಹಾಗೂ ಆತ್ಮಜ್ಞಾನದ ಮಾರ್ಗದ ಕುರಿತು ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಆಳವಾದ ಉಪನ್ಯಾಸ ನೀಡಲಿದ್ದಾರೆ.
ಇಂದಿನ ಒತ್ತಡಭರಿತ ಜೀವನದಲ್ಲಿ ಶಾಂತಿ, ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಲು ಅಗತ್ಯವಾದ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಈ ಕಾರ್ಯಕ್ರಮದ ಮೂಲಕ ಪಡೆಯಬಹುದು.
ಆಧ್ಯಾತ್ಮಿಕ ಜ್ಞಾನವನ್ನು ಅರಸುವವರು, ಯುವಜನತೆ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
7619115623, 7026293111
















