ಕುಂದಾಪುರ: ಇತ್ತೀಚಿಗೆ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಜಡ್ಕಲ್-ಮುದೂರಿನ ರೈತ ಗಂಗಾಧರ ಅವರಿಗೆ ಕೃಷಿ ಇಲಾಖೆಯಿಂದ ರೂ. 5ಲಕ್ಷ ಪರಿಹಾರ ಮಂಜೂರಾಗಿತ್ತು. ಈ ಮೊದಲು ಮೃತರ ಕುಟುಂಬಕ್ಕೆ ರೂ.3 ಲಕ್ಷ ಪರಿಹಾರ ನೀಡಲಾಗಿದ್ದು, ಬಾಕಿ ಉಳಿದ ರೂ. 2ಲಕ್ಷ ಪರಿಹಾರನಿಧಿ ಚೆಕ್‌ನ್ನು ಮೃತರ ಧರ್ಮಪತ್ನಿ ಮರಿಯಮ್ಮನವರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಭಾನುವಾರ ಹಸ್ತಾಂತರಿಸಿದರು. ನಂತರ ರೈತ ಕುಂಜ್ಞಿ ಕೆ.ಆರ್ ಅವರಿಗೆ ಇಲಾಖೆಯಿಂದ ಕೊಡಮಾಡಿದ ರೂ.೬೪,೫೦೦ ಸಬ್ಸಿಡಿ ಸಹಿತವಾದ ಪವರ್ ಟಿಲ್ಲರನ್ನು ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕೃಷಿ ನಿರ್ದೇಶಕದಾದ ಮೋಹನ್‌ರಾಜ್, ಪರಶುರಾಮ್, ಕೃಷಿ ಅಧಿಕಾರಿ ಗಾಯತ್ರಿ ದೇವಿ, ಜಡ್ಕಲ್-ಮುದೂರು ಗ್ರಾಪಂ ಸದಸ್ಯರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.