ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ರಿ. ಉಡುಪಿ, ಕುಂದಾಪುರ ವಲಯ ಮಂಗಳವಾರ ಕುಂದಾಪುರದ ಹೋಟೆಲ್ ಶೇರೋನ್ ನಲ್ಲಿ ಮೇಕಪ್ ಕಾರ್ಯಗಾರವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ರೇಖಾ ಅರ್ ಆಚಾರ್ಯ, ಜಿಲ್ಲಾ ಅಧ್ಯಕ್ಷರಾದ ಸುನಿತಾ ಗಣೇಶ್, ಮಾಜಿ ಜಿಲ್ಲಾ ಅಧ್ಯಕ್ಷರಾದ ಕಿಶ್ವರ್ ಜಹಾನ್ , ತರಬೇತುದಾರರಾದ ರೇಖಾ ಜಯರಾಮ್, ಕಾರ್ಯದರ್ಶಿಯಾದ ಪ್ರಮೀಳಾಪುತ್ರನ್, ಕೋಶಾಧಿಕಾರಿಯಾದ ಮಾಲತಿ ದೇವಾಡಿಗ, ಇವರೆಲ್ಲರೂ ಸೇರಿ ದೀಪ ಬೇಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮೇಕಪ್ ತರಬೇತಿದಾರರಾದ ಮಂಗಳೂರಿನ ರೇಖಾ ಜಯರಾಮ್ ಅವರು ತರಬೇತಿಯನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟರು. ಹಾಗೆಯೇ ಅಂತಿಮವಾಗಿ ಎಲ್ಲರಿಗೂ ಸರ್ಟಿಫಿಕೇಟ್ ನೀಡುವುದರ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.











