Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಸಾಗರಮಾಲಾ ಯೋಜನೆ ಹಾಗೂ ದುರಂತದಲ್ಲಿ ಮೃತಪಟ್ಟ ಮೀನುಗಾರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಸಂಸದ ಬಿ.ವೈ.ಆರ್ ಮನವಿ
    ಊರ್ಮನೆ ಸಮಾಚಾರ

    ಸಾಗರಮಾಲಾ ಯೋಜನೆ ಹಾಗೂ ದುರಂತದಲ್ಲಿ ಮೃತಪಟ್ಟ ಮೀನುಗಾರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಸಂಸದ ಬಿ.ವೈ.ಆರ್ ಮನವಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು
    : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಬಸವಂತಪ್ಪ ಅವರಿಗೆ ಎರಡು ಪ್ರಮುಖ ಮನವಿ ಪತ್ರಗಳನ್ನು ಸಲ್ಲಿಸಿ, ಬೈಂದೂರು ವಿಧಾನಸಭಾ ಕ್ಷೇತ್ರದ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಇತ್ತೀಚೆಗೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಮೂವರು ಯುವಕರ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವಂತೆ ಕೋರಿದ್ದಾರೆ.

    Click Here

    Call us

    Click Here

    1) ಮೀನುಗಾರಿಕಾ ಸಂಕಷ್ಟ ಪರಿಹಾರ ನಿಧಿಯಡಿ ಗರಿಷ್ಠ ಪರಿಹಾರಕ್ಕೆ ಒತ್ತಾಯ
    ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಗ್ರಾಮದಲ್ಲಿ ದಿನಾಂಕ 14-10-2025 ರಂದು ಸಂಭವಿಸಿದ ದುರಂತದ ಕುರಿತು ಸಚಿವರ ಗಮನ ಸೆಳೆದ ಸಂಸದರು, ನೊಂದ ಕುಟುಂಬಗಳಿಗೆ ಸಾಂತ್ವನ ನೀಡಲು ವಿಶೇಷ ನೆರವು ಕೋರಿದ್ದಾರೆ:

    * ಅರಬ್ಬಿ ಸಮುದ್ರದಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಕಿರಿಮಂಜೇಶ್ವರ ಗ್ರಾಮದ ಆಶೀಶ್ ದೇವಾಡಿಗ (15 ವರ್ಷ), ಸೂರಜ್ ಪೂಜಾರಿ (16 ವರ್ಷ) ಹಾಗೂ ಸಂಕೇತ್ ದೇವಾಡಿಗ (18 ವರ್ಷ) ಎಂಬ ಮೂವರು ಯುವಕರು ಮೃತಪಟ್ಟಿದ್ದಾರೆ.

    * ಮೃತ ಯುವಕರೆಲ್ಲರೂ ಅತ್ಯಂತ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದು, ಭವಿಷ್ಯದ ಆಸರೆಯಾಗಿದ್ದ ಮಕ್ಕಳನ್ನು ಕಳೆದುಕೊಂಡು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.

    * ಈ ದುರಂತವನ್ನು ಮಾನವೀಯತೆಯ ದೃಷ್ಟಿಯಿಂದ “ವಿಶೇಷ ಪ್ರಕರಣ” (Special Case) ವೆಂದು ಪರಿಗಣಿಸಿ, ಸರ್ಕಾರದ ಮೀನುಗಾರಿಕಾ ಸಂಕಷ್ಟ ಪರಿಹಾರ ನಿಧಿಯಡಿ ಮೃತ ಯುವಕರ ಕುಟುಂಬಗಳಿಗೆ ಶೀಘ್ರವಾಗಿ ಗರಿಷ್ಠ ಮೊತ್ತದ ಪರಿಹಾರ ಮಂಜೂರು ಮಾಡಬೇಕೆಂದು ಆಗ್ರಹಿಸಿದ್ದಾರೆ.

    Click here

    Click here

    Click here

    Call us

    Call us

    2) ಸಾಗರಮಾಲಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ
    ಬೈಂದೂರು ಕರಾವಳಿ ಭಾಗದ ಮೂಲಸೌಕರ್ಯ, ಮೀನುಗಾರರ ಸುರಕ್ಷತೆ ಮತ್ತು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಈ ಕೆಳಗಿನ ಯೋಜನೆಗಳ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಿ ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ಶಿಫಾರಸು ಪ್ರಸ್ತಾವನೆ ಸಲ್ಲಿಸಲು ಸಚಿವರಿಗೆ ವಿನಂತಿಸಲಾಗಿದೆ:

     * ಹೊಸ ಹೊರಬಂದರು ನಿರ್ಮಾಣ: ಉಪ್ಪುಂದ ಗ್ರಾಮದ ಮಡಿಕಲ್‌ನಲ್ಲಿ ಮೀನುಗಾರರ ಬಹುದಿನಗಳ ಬೇಡಿಕೆಯಾದ ಹೊಸ ಹೊರಬಂದರು ನಿರ್ಮಾಣ.

     * ಬಂದರು ಮತ್ತು ಮೀನು ಇಳಿದಾಣಗಳ (FLC) ಮೇಲ್ದರ್ಜೆಗೇರಿಸುವಿಕೆ: ಗಂಗೊಳ್ಳಿ ಬಂದರು, ಗಂಗೊಳ್ಳಿ ಮೆಗ್ನಿಶಿಯಂ ವಾರ್ಫ್, ಶಿರೂರು-ಆಳ್ವೆಗದ್ದೆ ಹಾಗೂ ಕೋಡೇರಿ ಮೀನು ಇಳಿದಾಣಗಳ ಆಧುನೀಕರಣ ಮತ್ತು ಭದ್ರತಾ ಮೂಲಸೌಕರ್ಯ ವೃದ್ಧಿ.

     * ಜೆಟ್ಟಿ ಸೌಲಭ್ಯಗಳ ವಿಸ್ತರಣೆ:

       * ಶಿರೂರು-ಆಳ್ವೆಗದ್ದೆ FLC ಯಲ್ಲಿ 60 ಮೀಟರ್ ಜೆಟ್ಟಿ ವಿಸ್ತರಣೆ.

       * ಕೋಡೇರಿ ಪೂರ್ವ ಮತ್ತು ಪಶ್ಚಿಮ FLC ಗಳಲ್ಲಿ ಎರಡೂ ಬದಿ ತಲಾ 200 ಮೀಟರ್ ಜೆಟ್ಟಿ ವಿಸ್ತರಣೆ.

       * ಮರವಂತೆ ಹೊರಬಂದರಿನಲ್ಲಿ 300 ಮೀಟರ್ ಉದ್ದದ ನೂತನ ಜೆಟ್ಟಿ ನಿರ್ಮಾಣ.

     * ಕರಾವಳಿ ರಕ್ಷಣೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ:

       * ರಾಷ್ಟ್ರೀಯ ಹೆದ್ದಾರಿ-66 ರ ಕರಾವಳಿ ಭಾಗವನ್ನು ರಕ್ಷಿಸಲು ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾಗಿ ಮರವಂತೆ ಬೀಚ್ ಅಭಿವೃದ್ಧಿ.

       * ಬೋಟ್‌ಗಳ ಸುರಕ್ಷಿತ ಸಂಚಾರಕ್ಕಾಗಿ ಗಂಗೊಳ್ಳಿ, ಶಿರೂರು-ಆಳ್ವೆಗದ್ದೆ, ಕೋಡೇರಿ ಮತ್ತು ಮರವಂತೆ ಭಾಗಗಳಲ್ಲಿ ಅಲೆತಡೆಗೋಡೆಗಳ (Breakwater) ವಿಸ್ತರಣೆ.

     * ಹೂಳೆತ್ತುವಿಕೆ ಮತ್ತು ಸಂಪರ್ಕ ರಸ್ತೆಗಳು:

       * ಗಂಗೊಳ್ಳಿ, ಶಿರೂರು-ಆಳ್ವೆಗದ್ದೆ, ಕೋಡೇರಿ ಮತ್ತು ಮರವಂತೆ ಬಂದರುಗಳಲ್ಲಿ ಬೋಟ್‌ಗಳ ಸುಗಮ ಸಂಚಾರಕ್ಕೆ ಅಗತ್ಯ ನೀರಿನ ಆಳ ಕಾಪಾಡಲು ತುರ್ತು ಹೂಳೆತ್ತುವ (Dredging/Desilting) ಕಾಮಗಾರಿ.

       * ಬಂದರುಗಳಿಂದ ಹಿಡಿದ ತಾಜಾ ಮೀನುಗಳನ್ನು ಮಾರುಕಟ್ಟೆಗೆ ತ್ವರಿತವಾಗಿ ಸಾಗಿಸಲು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಉನ್ನತೀಕರಣ.

    ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಪಡಿಸಿದ ಶಾಸಕ ಗಂಟಿಹೊಳೆ

    21/08/2026

    ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ

    21/08/2026

    ಬಸ್ರೂರು ಶ್ರೀ ಶಾರದಾ ಕಾಲೇಜು: ಶಿಕ್ಷಕ – ರಕ್ಷಕ ಸಭೆ

    21/08/2026
    Leave A Reply Cancel Reply

    5 × 4 =

    Call us

    Click Here

    Call us

    Call us

    Call us
    Highest Viewed Recently
    • ಸಾಗರಮಾಲಾ ಯೋಜನೆ ಹಾಗೂ ದುರಂತದಲ್ಲಿ ಮೃತಪಟ್ಟ ಮೀನುಗಾರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಲು ಸಂಸದ ಬಿ.ವೈ.ಆರ್ ಮನವಿ
    • ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಪಡಿಸಿದ ಶಾಸಕ ಗಂಟಿಹೊಳೆ
    • ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ
    • ಬಸ್ರೂರು ಶ್ರೀ ಶಾರದಾ ಕಾಲೇಜು: ಶಿಕ್ಷಕ – ರಕ್ಷಕ ಸಭೆ
    • ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯ ನಿಗ್ರಹಕ್ಕೆ ಸದನದಲ್ಲಿ ಒತ್ತಾಯಿಸಿದ ಶಾಸಕ ಗಂಟಿಹೊಳೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.