ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಪ್ರಗತಿಪರ ಸೌಹಾರ್ದ ಸಹಕಾರಿ ಸಂಘ ನಿ. ಇದರ ಸರ್ವ ಸದಸ್ಯರ ಐದನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸಂಸ್ಥೆಗೆ ಸಹಕರಿಸಿದ ಮಹನೀಯರಿಗೆ ಅಭಿನಂದನಾ ಕಾರ್ಯಕ್ರಮವು ಇಲ್ಲಿನ ವೈಶಾಲಿ ಕಾಂಪ್ಲೆಕ್ಸ್ ಮಿನಿ ಹಾಲ್‌ನಲ್ಲಿ ಭಾನುವಾರ ನಡೆಯಿತು .
ಈ ಸಂದರ್ಭದಲ್ಲಿ ಚಿಲ್ಡ್ರನ್ ಫ್ಯಾಶನ್ ಮಾಲೀಕರಾದ ಆನಂದ್ ರಾವ್ ಕೆ., ವೈಶಾಲಿ ಕಾಂಪ್ಲೆಕ್ಸ್ ಮಾಲೀಕರಾದ ಹಂಸರಾಜ ಶೆಟ್ಟಿ, ಶ್ರೀದೇವಿ ಮೆಡಿಕಲ್ಸ್ ನ ಗಣೇಶ್ ಬೆಟ್ಟಿನ್, ಕೊತ್ವಾಲ್ ಟ್ರೇಡರ್ ನ ಅರವಿಂದ ಕೊತ್ವಾಲ್, ಬಿಲ್ಲವ ಮಹಿಳಾ ಘಟಕದ ಮಾಜಿ ಅಧ್ಯಕ್ಷ ಸುಶೀಲಾ ಶಂಕರ್ ಪೂಜಾರಿ ಕೋಡಿ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷ ಯಕ್ಷಗಾನ ಪ್ರಸಂಗ ಕರ್ತೆ ಶಾಂತ ವಾಸುದೇವ ಪೂಜಾರಿ ಅವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಕೆ. ರಮೇಶ್ ಪ್ರಭು, ರಾಘವೇಂದ್ರ ಲೋಕೇಶ್ ಪೂಜಾರಿ, ಗುರುರಾಜ್ ಕಾವೇರಿ, ಮಂಜುನಾಥ್ ನರಸಿಬೆಟ್ಟು ಕೋಡಿ, ಗಂಗಾಧರ್ ಪೂಜಾರಿ, ಸುರೇಶ್ ಪೂಜಾರಿ ಕಲಾಗಾರ, ಭಾರತಿ ಉಮೇಶ್ ಪೂಜಾರಿ, ಕಿರಣ್ ನೆರಂಬಳ್ಳಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಪೂಜಾರಿ 9% ಡಿವಿಡೆಂಟ್ ಘೋಷಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ್ ಕೆ. ಎಲ್ಲರನ್ನೂ ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರ್ವಹಣಾಧಿಕಾರಿ ಅಶೋಕ್ ಪೂಜಾರಿ ಸಂಸ್ಥೆಯ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾಪಿಸಿದರು. ಗೋಪಾಲ್ ವಡೇರಹೋಬಳಿ ಧನ್ಯವಾದ ಸಮರ್ಪಿಸಿದರು.
















